ಅಂಗಾಂಗಗಳು ಅಸಮರ್ಪಕವಾಗಿ ಕೆಲಸ ಮಾಡುತ್ತಿದೆ, ಚೇತರಿಕೆ ಅಸಾಧ್ಯ: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಕುಟುಂಬ

ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಆರೋಗ್ಯ ಹದಗೆಟ್ಟ ನಂತರ ಕಳೆದ ಮೂರು ವಾರಗಳಿಂದ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರ ಕುಟುಂಬ ಶುಕ್ರವಾರ ತಿಳಿಸಿದೆ.
ಅವರು ವೆಂಟಿಲೇಟರ್‌ನಲ್ಲಿಲ್ಲ. ಕಳೆದ 3 ವಾರಗಳಿಂದ ಅವರ ಅನಾರೋಗ್ಯದ (ಅಮಿಲೋಡೋಸಿಸ್) ತೊಡಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೇತರಿಕೆ ಸಾಧ್ಯವಾಗದ ಮತ್ತು ಅಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಕಠಿಣ ಹಂತಕ್ಕೆ ಹೋಗಿದ್ದಾರೆ. ಅವರ ದೈನಂದಿನ ಜೀವನವು ಸುಲಭವಾಗಲಿ ಎಂದು ಪ್ರಾರ್ಥಿಸಿ ಎಂದು ನಿವೃತ್ತ ಪಾಕಿಸ್ತಾನಿ ಜನರಲ್ ಅವರ ಕುಟುಂಬ ಟ್ವೀಟ್ ಮಾಡಿದೆ.

ಅಮಿಲೋಯ್ಡೋಸಿಸ್ ಒಂದು ಅಪರೂಪದ ಕಾಯಿಲೆಯಾಗಿದ್ದು, ಇದು ದೇಹದಲ್ಲಿ ಅಸಹಜ ಪ್ರೋಟೀನ್‌ಗೆ ಕಾರಣವಾಗುತ್ತದೆ ಮತ್ತು ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ.
78 ವರ್ಷದ ಮುಷರಫ್ ಅವರು 1999 ರಿಂದ 2008 ರವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪಾಕಿಸ್ತಾನಿ ಮಿಲಿಟರಿಯ ಮುಖ್ಯಸ್ಥರೂ ಆಗಿದ್ದರು ಮತ್ತು ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಸೈನ್ಯ ದಂಗೆಯಲ್ಲಿಕಿತ್ತು ಹಾಕುವ ಮೂಲಕ ಅಧಿಕಾರಕ್ಕೆ ಬಂದಿದ್ದರು. 2008 ರ ಚುನಾವಣೆಯ ನಂತರ ದೋಷಾರೋಪಣೆಯನ್ನು ಎದುರಿಸುತ್ತಿರುವ ಮುಷರಫ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಮತ್ತು ದೇಶಭ್ರಷ್ಟರಾಗಿ ದುಬೈನಲ್ಲಿ ಇರಬೇಕಾಯಿತು.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣ ಮತ್ತು ರೆಡ್ ಮಸೀದಿಯ ಧರ್ಮಗುರುಗಳ ಹತ್ಯೆ ಪ್ರಕರಣದಲ್ಲಿ ಮುಷರಫ್ ಅವರನ್ನು ಪರಾರಿ ಎಂದು ಘೋಷಿಸಲಾಗಿದೆ.
ಮಾಜಿ ಅಧ್ಯಕ್ಷರು, ಮಾರ್ಚ್ 2016 ರಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ, 2007 ರಲ್ಲಿ ಸಂವಿಧಾನವನ್ನು ಅಮಾನತುಗೊಳಿಸಿದ್ದಕ್ಕಾಗಿ ದೇಶದ್ರೋಹದ ಪ್ರಕರಣವನ್ನು ಎದುರಿಸುತ್ತಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement