ಪ್ರವಾದಿ ಇಂದು ಬದುಕಿದ್ದರೆ…: ಪ್ರತಿಭಟನೆ ಭುಗಿಲೇಳುತ್ತಿದ್ದಂತೆ ತಸ್ಲೀಂ ನಸ್ರೀನ್ ಹೇಳಿಕೆ

ನವದೆಹಲಿ: ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಪ್ರವಾದಿ ಮುಹಮ್ಮದ್ ಕುರಿತು ಭಾರತೀಯ ಜನತಾ ಪಕ್ಷದ ಅಮಾನತುಗೊಂಡಿರುವ ವಕ್ತಾರರಾದ ನೂಪುರ್ ಶರ್ಮಾ ಹೇಳಿಕೆಗಳ ಕುರಿತು ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸಿದ್ದಾರೆ.
ಟ್ವಿಟರ್‌ನಲ್ಲಿ ತಸ್ಲೀಮಾ ನಸ್ರೀನ್ ಪ್ರವಾದಿ ಮುಹಮ್ಮದ್ ಕುರಿತಾದ ಹೇಳಿಕೆಗಳ ಬಗ್ಗೆ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಪ್ರವಾದಿ ಮುಹಮ್ಮದ್ ಇಂದು ಜೀವಂತವಾಗಿದ್ದರೆ, ಪ್ರಪಂಚದಾದ್ಯಂತದ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಅವರು ಆಘಾತಕ್ಕೊಳಗಾಗುತ್ತಿದ್ದರು ಎಂದು ಹೇಳಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ನೂಪುರ್ ಶರ್ಮಾ ಅವರ ಹೇಳಿಕೆಗೆ ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿರುವಂತೆಯೇ ತಸ್ಲೀಮಾ ನಸ್ರೀನ್ ಅವರ ಹೇಳಿಕೆ ಬಂದಿದೆ. ಪ್ರತಿಭಟನಾಕಾರರು ನೂಪುರ್ ಶರ್ಮಾ ಅವರನ್ನು ಬಂಧಿಸಲು ಮತ್ತು ಕೆಲವು ಪ್ರಕರಣಗಳಲ್ಲಿ ಮರಣದಂಡನೆಗೆ ಒತ್ತಾಯಿಸಿದರು.
ಈ ವಿವಾದ ನೆರೆಯ ಬಾಂಗ್ಲಾದೇಶಕ್ಕೂ ಹಬ್ಬಿದೆ. ಶುಕ್ರವಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸಾವಿರಾರು ಜನರು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಬಿಜೆಪಿ ನಾಯಕ ನೂಪುರ್ ಶರ್ಮಾ ನೀಡಿದ ಹೇಳಿಕೆಯನ್ನು ವಿರೋಧಿಸಿ ಇಂದು ಮೆರವಣಿಗೆ ನಡೆಸಿದರು.

ಓದಿರಿ :-   ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಬಾಳ್ ಠಾಕ್ರೆ ಫೋಟೊ ಹಾಕಿಕೊಂಡ ನೂತನ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ಬಾಂಗ್ಲಾದೇಶದ ಪ್ರತಿಭಟನಾಕಾರರು ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಜೂನ್ 16 ರಂದು ಭಾರತೀಯ ರಾಯಭಾರ ಕಚೇರಿಗೆ ಘೇರಾವ್ ಹಾಕಲು ಕರೆ ನೀಡಿದರು. ಪ್ರತಿಭಟನಾಕಾರರು ಭಾರತೀಯ ಉತ್ಪನ್ನಗಳು ಮತ್ತು ಭಾರತವನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.
ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರು ಪ್ರವಾದಿ ಮುಹಮ್ಮದ್ ಕುರಿತು ನೀಡಿದ ಹೇಳಿಕೆಗೆ ಹಲವಾರು ಗಲ್ಫ್ ದೇಶಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ