ಪ್ರಿಯಕರನ ಜೊತೆ ಸೇರಿ ತಾಯಿಗೆ ಚಾಕುವಿನಿಂದ ಇರಿದ ಅಪ್ರಾಪ್ತ ಮಗಳು!

posted in: ರಾಜ್ಯ | 0

ಧಾರವಾಡ: ಪ್ರಿಯಕರನ ಜೊತೆ ಸೇರಿ ತಾಯಿಗೆ ಚೂರಿ ಇರಿದ ಅಪ್ರಾಪ್ತ ವಯಸ್ಸಿನ ಮಗಳು ನಂತರ ಆತನ ಜತೆ ಪರಾರಿಯಾದ ಆಘಾತಕಾರಿ ಘಟನೆ ಧಾರವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಚಾಕುವಿನಿಂದ ಇರಿತಕ್ಕೊಳಗಾದ ಮಹಿಳೆಯನ್ನು ಜೀಜಾಬಾಯಿ ಎಂದು ಗುರುತಿಸಲಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

advertisement

ಆರೋಪಿ ಪರಶುರಾಮ ಹಾಗೂ ಅವರ ಮಗಳು ಕೆಲ ದಿನಗಳ ಹಿಂದೆ ಓಡಿಹೋಗಿದ್ದರು. ತನ್ನ ಮಗಳು ಇನ್ನೂ ಅಪ್ರಾಪ್ತೆಯಾಗಿದ್ದು, ಅವಳನ್ನು ತನಗೆ ಒಪ್ಪಿಸಬೇಕೆಂದು ಜೀಜಾಬಾಯಿ ದೂರು ದಾಖಲಿಸಿದ್ದರು. ಈ ಬಳಿಕ ಪತ್ತೆ ಮಾಡಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಅಪ್ರಾಪ್ತ ಮಗಳನ್ನು ಬಾಲಭವನದಲ್ಲಿ ಇರಿಸಲಾಗಿತ್ತು. ಅಪ್ರಾಪ್ತೆಯಾಗಿರುವ ಕಾರಣಕ್ಕೆ ಪ್ರಿಯಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ. ತಮ್ಮ ಮೇಲೆ ದೂರು ನೀಡಿದ್ದರಿಂದ ತಾಯಿ ಮೇಲೆ ಕೋಪಗೊಂಡಿದ್ದ ಮಗಳು ಮತ್ತು ಆಕೆಯ ಪ್ರಿಯಕರ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಪರಶುರಾಮ, ಮನೆಗೆ ಬಂದು ದಾಳಿ ನಡೆಸಿದ್ದಾನೆ. ಈ ವೇಳೆ ತನ್ನ ತಾಯಿಗೆ ಚಾಕು ಇರಿದು ಮಗಳು ಆತನೊಂದಿಗೆ ಪರಾರಿಯಾಗಿದ್ದಾಳೆ ಎಂದು ಹೇಳಲಾಗಿದೆ.

ಓದಿರಿ :-   ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಹಾಯಕ ಆಯುಕ್ತರಿಂದ ಧ್ವಜಾರೋಹಣ; ಸಚಿವ ಅಶೋಕ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement