ತಡರಾತ್ರಿ ಮೊಬೈಲ್‌ನಲ್ಲಿ ಮಾತಾಡಬೇಡ ಎಂದು ಹೇಳಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ…!

ದಾಮೋಹ್ (ಮಧ್ಯಪ್ರದೇಶ) : ತನ್ನ ಅತ್ತೆ ತಡರಾತ್ರಿ ಮೊಬೈಲ್ ಫೋನ್‌ನಲ್ಲಿ ನಿರಂತರವಾಗಿ ಮಾತನಾಡುವುದನ್ನು ವಿರೋಧಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಅತ್ತೆಯನ್ನೇ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಮೃತನ ಮಗ ಅಜಯ್ ಬರ್ಮನ್ ತನ್ನ ತಾಯಿಯ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗಾಯದ ಗುರುತುಗಳಿದ್ದ ಮೃತದೇಹ ಪತ್ತೆಯಾಗಿದೆ.

ಅಜಯ್ ಪ್ರಕಾರ, ಅವರು ತನ್ನ ಹೆಂಡತಿಗೆ ಕರೆ ಮಾಡಿದಾಗ ತಾನು ಕೆಲಸದಲ್ಲಿದ್ದನೆಂದು ತಿಳಿಸಿದ್ದಾಳೆ ಹಾಗೂ ಅತ್ತೆ ಗಾಯಗೊಂಡ ಸ್ಥಿತಿಯಲ್ಲಿ ಹೊರಗಿನಿಂದ ಮನೆಗೆ ಬಂದಿದ್ದಾಳೆ ಎಂದು ಹೇಳಿದ್ದಾಳೆ. ಅವರು ತಕ್ಷಣವೇ ಮನೆಗೆ ತಲುಪಿದಾಗ ತಾಯಿ ಸತ್ತಿದ್ದರು.
ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಆರಂಭದಲ್ಲಿ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾಳೆ, ಆದರೆ ತೀವ್ರ ವಿಚಾರಣೆ ವೇಳೆ ಅವಳು ತನ್ನ ಅತ್ತೆಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾಳೆ.
ಆಜ್ ತಕ್‌ನೊಂದಿಗೆ ಮಾತನಾಡಿದ ಹಟ್ಟಾ ಪೊಲೀಸ್ ಠಾಣೆಯ ಪ್ರಭಾರಿ ಎಚ್‌ಆರ್ ಪಾಂಡೆ, ವಿಚಾರಣೆ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಹೇಳಿದರು. ಮೊಬೈಲ್ ಫೋನ್ ಬಳಸುತ್ತಿರುವ ಬಗ್ಗೆ ಅತ್ತೆ ತನ್ನ ಪತಿಗೆ ಪದೇ ಪದೇ ದೂರು ನೀಡುತ್ತಿದ್ದಳು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಕೆಲ ದಿನಗಳ ಹಿಂದೆ ರಾತ್ರಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅತ್ತೆ ಮತ್ತೆ ಪತಿಗೆ ದೂರು ನೀಡಿದ್ದು, ಬಳಿಕ ಆಕೆಯಿಂದ ಫೋನ್ ಕಿತ್ತುಕೊಳ್ಳಲಾಯಿತು.
ಇದರಿಂದ ಸಿಟ್ಟಿಗೆದ್ದಿದ್ದ ಅವಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಪಿತಗೊಂಡ ಅತ್ತೆಯ ತಲೆಗೆ ಹೊಡೆದಿದ್ದಾಳೆ. ಅತ್ತೆ ಸ್ಥಳದಲ್ಲೇ ಸಾವಗೀಡಾಗಿದ್ದಾಳೆ. ನಂತರ ಆಕೆ ಅನುಮಾನದಿಂದ ಪಾರಾಗಲು ಕಥೆಯೊಂದನ್ನು ಹೆಣೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದು, ಮಹಿಳೆಯನ್ನು ಬಂಧಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement