ನೂಪುರ್ ಶರ್ಮಾ ಶಿರಚ್ಛೇದ ಚಿತ್ರಿಸಿದ ವೀಡಿಯೊ ಅಪ್‌ಲೋಡ್: ಶ್ರೀನಗರದಲ್ಲಿ ಯೂ ಟ್ಯೂಬರ್ ಬಂಧನ

ಶ್ರೀನಗರ: ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಶಿರಚ್ಛೇದವನ್ನು ಚಿತ್ರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಕಾಶ್ಮೀರಿ ಯೂಟ್ಯೂಬರ್‌ನನ್ನು ಶನಿವಾರ ಇಲ್ಲಿ ಸಾರ್ವಜನಿಕ ನೆಮ್ಮದಿಯನ್ನು ಉಲ್ಲಂಘಿಸಿದ ಮತ್ತು ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಿದ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾನಿ ಎಂಬವರು ವೀಡಿಯೊವನ್ನು ಡಿಲೀಟ್ ಮಾಡಿದ್ದು, ಅದಕ್ಕಾಗಿ ಕ್ಷಮೆಯನ್ನೂ ಕೇಳಿದ್ದಾರೆ.
ಬಂಧನಕ್ಕೂ ಮುನ್ನ, ವಾನಿ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಜನರು ಅಥವಾ ಯಾವುದೇ ಧರ್ಮದ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

YouTuber ಫೈಸಲ್ ವಾನಿಯನ್ನು ಬಂಧಿಸಲಾಗಿದೆ. ಅವರು ಸಾರ್ವಜನಿಕ ನೆಮ್ಮದಿಗೆ ವಿರುದ್ಧವಾದ ದೋಷಾರೋಪಣೆಯ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂ ಆರೋಪದಡಿ ಎಫ್‌ಐಆರ್ ಅನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 ಮತ್ತು 506 ರ ಅಡಿಯಲ್ಲಿ ಸಫಾ ಕಡಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾನಿ ಅವರು ವೈರಲ್ ವೀಡಿಯೊವನ್ನು ಅಳಿಸಿಹಾಕಿದ ನಂತರ ಮತ್ತು ಅವರ ಯೂಟ್ಯೂಬ್ ಚಾನೆಲ್ “ಡೀಪ್ ಪೇನ್ ಫಿಟ್ನೆಸ್” ನಲ್ಲಿ ಪೋಸ್ಟ್ ಮಾಡಿದ ಹೊಸ ವೀಡಿಯೊದಲ್ಲಿ ಕ್ಷಮೆಯಾಚಿಸಿದ ನಂತರ ಬಂಧಿಸಲಾಯಿತು.
ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಹೌದು, ನಾನು ಆ ವೀಡಿಯೊವನ್ನು ಮಾಡಿದ್ದೇನೆ, ಆದರೆ ನಾನು ಏನನ್ನೂ ಉಲ್ಲಂಘಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನಾನು ಕಳೆದ ರಾತ್ರಿಯೇ ವೀಡಿಯೊವನ್ನು ಅಳಿಸಿದ್ದೇನೆ, ಆದರೆ ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನನ್ನು ಕ್ಷಮಿಸಿ,” ಎಂದು ಯೂಟ್ಯೂಬರ್ ವೀಡಿಯೊದಲ್ಲಿ ಕೈಮುಗಿದು ಹೇಳಿದ್ದಾರೆ. ಇದರಿಂದ ಯಾರಿಗಾದರೂ ನೋವಾಗಿದ್ದರೆ, ನಾನು ತುಂಬಾ ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

ತನ್ನನ್ನು ತಾನು ಸರಳ ವ್ಯಕ್ತಿ ಎಂದು ಬಣ್ಣಿಸಿರುವ ವಾನಿ, ಎರಡನೇ ವೀಡಿಯೊ ಕೂಡ ವೈರಲ್ ಆಗಲಿದೆ.ಇದರಿಂದ ನನ್ನ ಕ್ಷಮೆ ಎಲ್ಲರಿಗೂ ತಲುಪುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ, ಹಾಗೂ ನಾನು ನಿರಪರಾಧಿಯಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ವಾನಿ ಅವರ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಈಗ ಅಳಿಸಲಾದ ವೀಡಿಯೊದಲ್ಲಿ ಯೂಟ್ಯೂಬರ್ ಕತ್ತಿಯನ್ನು ಹಿಡಿದು ಶರ್ಮಾ ಅವರ ಶಿರಚ್ಛೇದವನ್ನು ತೋರಿಸಿದೆ.
ನೂಪುರ್‌ ಶರ್ಮಾ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಮಾನತುಗೊಳಿಸಿದೆ ಮತ್ತು ಮತ್ತೊಬ್ಬ ನಾಯಕ ನವೀನ್ ಜಿಂದಾಲ್ ಅವರನ್ನು ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಉಚ್ಚಾಟಿಸಲಾಯಿತು.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement