ಭಾರತದಲ್ಲಿ ಏರುತ್ತಿದೆ ಕೊರೊನಾ ಪ್ರಕರಣ… ಕಳೆದ 24 ಗಂಟೆಗಳಲ್ಲಿ 8,329 ಹೊಸ ಪ್ರಕರಣಗಳು ದಾಖಲು. ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳ

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,329 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದಾಗಿ 10 ಸಾವುಗಳು ಸಂಭವಿಸಿವೆ.
ಭಾರತದಲ್ಲಿ ಕೋವಿಡ್‌-19 ನ ಒಟ್ಟು ಸಕ್ರಿಯ ಪ್ರಕರಣಗಳು 40,370 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ. ನಿನ್ನೆ 36,267 ಸಕ್ರಿಯ ಪ್ರಕರಣಗಳು ದಾಖಲಾಗಿತ್ತು. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್‌-19 ಕ್ಯಾಸೆಲೋಡ್‌ನಲ್ಲಿ 4,103 ಪ್ರಕರಣಗಳ ಹೆಚ್ಚಳ ದಾಖಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.09 ಪ್ರತಿಶತವನ್ನು ಒಳಗೊಂಡಿವೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ (ಜೂನ್ 11) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 3,791 ಡಿಸ್ಚಾರ್ಜ್‌ಗಳನ್ನು ಕಂಡಿದೆ, ಒಟ್ಟು ಚೇತರಿಕೆ ದರವನ್ನು ಸುಮಾರು 98.69 ಪ್ರತಿಶತಕ್ಕೆ ತೆಗೆದುಕೊಂಡು ಒಟ್ಟು ಚೇತರಿಕೆಯನ್ನು 4,26,48,308ಕ್ಕೆ ಒಯ್ದಿದೆ. ಸೋಂಕಿನಿಂದಾಗಿ 10 ಸಾವುಗಳು ಸಂಭವಿಸಿದ ನಂತರ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,24,747 ಆಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜೂನ್ 10 ರವರೆಗೆ ಕೋವಿಡ್‌-19 ಗಾಗಿ 85,45,43,282 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಶುಕ್ರವಾರ 3,44,994 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಮುಂಬೈ ಕೋವಿಡ್ ಸಂಖ್ಯೆ:

ಏತನ್ಮಧ್ಯೆ, ಮುಂಬೈ ಶುಕ್ರವಾರ 1,956 ಹೊಸ ಕೋವಿಡ್‌-19 ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ ಎಂದು ಬಿಎಂಸಿ ಸುತ್ತೋಲೆ ತಿಳಿಸಿದೆ. ಇದು ಈ ವರ್ಚದ ಜನವರಿ 23ರ ನಂತರ ನಾಲ್ಕೂವರೆ ತಿಂಗಳಲ್ಲಿ ಒಂದೇ ದಿನದ ಗರಿಷ್ಠ ಏರಿಕೆಯಾಗಿದೆ.
ಮುಂಬೈ, ಜೂನ್‌ನ ಮೊದಲ ಹತ್ತು ದಿನಗಳಲ್ಲೇ ಇಡೀ ಮೇ ತಿಂಗಳಲ್ಲಿ ವರದಿ ಮಾಡಿದ ಪ್ರಕರಣಗಳ ಎರಡರಷ್ಟನ್ನು ವರದಿ ಮಾಡಿದೆ. ಗುರುವಾರ ಮುಂಬೈನಲ್ಲಿ 1,702 ಹೊಸ ಪ್ರಕರಣಗಳು ವರದಿಯಾಗಿತ್ತು.
ಸಾವಿನ ಸಂಖ್ಯೆ ಬದಲಾಗದೆ 19,570 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ದಿನದ ಹಿಂದಿನ 7,898 ರಿಂದ ಶುಕ್ರವಾರ 9,191 ಕ್ಕೆ ಏರಿದೆ. ಪಾಸಿಟಿವಿಟಿ ದರ ಅಥವಾ ಪ್ರತಿ 100 ಪರೀಕ್ಷೆಗಳಿಗೆ ಪತ್ತೆಯಾದ ಪ್ರಕರಣಗಳು ಕೂಡ ಬಹಳ ಸಮಯದ ನಂತರ ಶೇಕಡಾ 10 ಕ್ಕಿಂತ ಹೆಚ್ಚಾಗಿದೆ ಮತ್ತು ಇದು ಶೇಕಡಾ 12.74 ರಷ್ಟಿದೆ. ಗುರುವಾರ ಶೇ.9.64ರಷ್ಟಿತ್ತು. ಕಳೆದ 24 ಗಂಟೆಗಳಲ್ಲಿ ಚೇತರಿಕೆಯ ಸಂಖ್ಯೆ 763 ರಿಂದ 10,48,438 ಕ್ಕೆ ತಲುಪಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಜೂನ್ 1 ರಿಂದ 10 ರ ನಡುವೆ, ಮಹಾನಗರವು 11,397 ಕೋವಿಡ್‌ ID-19 ಪ್ರಕರಣಗಳನ್ನು ವರದಿ ಮಾಡಿದೆ, ಆದರೆ ಮೇ ತಿಂಗಳಲ್ಲಿ ಅದು 5,979 ಪ್ರಕರಣಗಳನ್ನು ಮಾತ್ರ ವರದಿ ಮಾಡಿದೆ. ಇಡೀ ಮೇ ತಿಂಗಳಲ್ಲಿ ಮೂರು ಸಾವುಗಳ ವಿರುದ್ಧ ಜೂನ್‌ನ ಮೊದಲ 10 ದಿನಗಳಲ್ಲಿ ನಾಲ್ಕು ಸಾವುಗಳನ್ನು ನಗರವು ವರದಿ ಮಾಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement