ಕಬಿನಿ ಶಕ್ತಿಮಾನ್ ಖ್ಯಾತಿಯ ಉದ್ದ ದಂತದ ಆನೆ ‘ಭೋಗೇಶ್ವರ’ ಸಾವು

posted in: ರಾಜ್ಯ | 0

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿಯಲ್ಲಿ ಉದ್ದವಾದ ದಂತ ಹೊಂದಿದ್ದ ಆನೆ ಶನಿವಾರ (ಜೂನ್ 11) ಮೃತಪಟ್ಟಿದೆ.
ಉದ್ದನೆಯ ದಂತಗಳಿಂದ ಪ್ರಖ್ಯಾತವಾಗಿದ್ದ ಭೋಗೇಶ್ವರ ಗಂಡಾನೆ ನಾಗರಹೊಳೆ, ಬಂಡೀಪುರ ವ್ಯಾಪ್ತಿಯಲ್ಲಿ ಸಫಾರಿ ವೇಳೆ ಪ್ರವಾಸಿಗರಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು.

advertisement

ವನ್ಯಜೀವಿ ಪ್ರಿಯರ ನೆಚ್ಚಿನ ಅನೆಯಾಗಿತ್ತು. ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಗಳಿಸಿದ್ದ, ತನ್ನ 4 ಅಡಿ ಉದ್ದದ ದಂತ ಹಾಗೂ ತನ್ನದೇ ವಿಶೇಷ ನಡಿಗೆಯ ಮೂಲಕ ಕಬಿನಿ ಹಿನ್ನೀರಿನಲ್ಲಿ ಪ್ರವಾಸಿಗರಿಗೆ ಸಾಕಷ್ಟು ಆಕರ್ಷಣೆಯಾಗಿತ್ತು. ಭೋಗೇಶ್ವರ ಆನೆಗೆ 60 ವರ್ಷ ವಯಸ್ಸಾಗಿತ್ತು. ಭೋಗೇಶ್ವರ ಆನೆಯ ಕಳೆಬರವು ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಅತ್ಯಂತ ಹಿರಿಯ ಆನೆ ಇದಾಗಿದ್ದು ವಯೋಸಹಜವಾಗಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಮರಣೋತ್ತರ ಪರೀಕ್ಷೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಅಂತ್ಯಕ್ರಿಯೆ ನಡೆಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಬೆಳಗಾವಿ ನಂತರ ಈಗ ಮೂಡಲಗಿಯ ಧರ್ಮಟ್ಟಿಯಲ್ಲೂ ಚಿರತೆ ಪ್ರತ್ಯಕ್ಷ

ನಿಮ್ಮ ಕಾಮೆಂಟ್ ಬರೆಯಿರಿ

advertisement