ಪ್ರತಿ ಕೆಜಿ ತೂಕ ಇಳಿಸಿದ್ರೆ 1,000 ಕೋಟಿ ರೂ.ಅಭಿವೃದ್ಧಿ ನಿಧಿ ಭರವಸೆ ನೀಡಿದ ಸಚಿವ ಗಡ್ಕರಿ: 15 ಕೆಜಿ ಇಳಿಸಿಕೊಂಡ ಉಜ್ಜಯಿನಿ ಸಂಸದ

 ಉಜ್ಜಯಿನಿ: ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರು ತಮ್ಮ ದೇಹದ ತೂಕ ಇಳಿಸಿಕೊಳ್ಳುವ ಕಡೆ ಗಮನ ಹರಿಸಿದ್ದಾರೆ. ಕೇವಲ ಫಿಟ್​ ಆಗಿರಲು ಇವರು ತೂಕ ಇಳಿಸಿಕೊಳ್ಳುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.
50 ವರ್ಷದ ಅನಿಲ್ ಫಿರೋಜಿಯಾ ಕಳೆದ ಫೆಬ್ರವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದಾಗ 127 ಕೆಜಿ ತೂಕ ಹೊಂದಿದ್ದರು. ಅವರನ್ನು ಸದೃಢರಾಗಲು ಪ್ರೇರೇಪಿಸಿದ ಕೇಂದ್ರ ಸಚಿವರು ಉಜ್ಜಯಿನಿ ಸಂಸದೀಯ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ತಮ್ಮ ಸಚಿವಾಲಯದಿಂದ ಹಣವನ್ನು ಪಡೆಯಯಬೇಕಾದರೆ ತೂಕ ಇಳಿಸಿಕೊಳ್ಳಲು ಸೂಚಿಸಿದ್ದಾರೆ. ತೂಕ ಇಳಿಸಿಕೊಳ್ಳುವ ಪ್ರತಿ ಕೆಜಿಗೆ 1000 ಕೋಟಿ ರೂಪಾಯಿ ಅನುದಾನ ನೀಡುವುದಾಗು ಭರವಸೆ ನೀಡಿದ್ದರು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಸಚಿವ ಗಡ್ಕರಿ ನೀಡಿದ ಭರವಸೆಯಂತೆ ತಮ್ಮ ಕ್ಷೇತ್ರ ಉಜ್ಜಯಿನಿಯ ಅಭಿವೃದ್ಧಿಗೆ ಅನುದಾನದ ತರುವುದಕ್ಕಾಗಿ ಅವರು ಈ ಕಸರತ್ತು ನಡೆಸುತ್ತಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿದ ಅನಿಲ್ ಫಿರೋಜಿಯಾ ತಮ್ಮ ಕೆಲಸದ ಒತ್ತಡದ ನಡುವೆವೂ ವ್ಯಾಯಾಮ ಮಾಡಿ ಕೇವಲ ನಾಲ್ಕು ತಿಂಗಳಲ್ಲಿ ಬರೋಬ್ಬರಿ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ತಮ್ಮ ದೇಹದ ಬೊಜ್ಜನ್ನು ಕರಗಿಸಲು ಫಿರೋಜಿಯಾ ಕಟ್ಟುನಿಟ್ಟಾದ ಆಹಾರ ಪದ್ಧತಿ (ಡಯಟಿಂಗ್‌) ಪಾಲಿಸಿದ್ದಾರೆ. ಸೈಕ್ಲಿಂಗ್, ಈಜು ಸೇರಿದಂತೆ 2-3 ಗಂಟೆಗಳ ದೈನಂದಿನ ತಾಲೀಮು ಮಾಡಿದ್ದಾರೆ. “ಪ್ರತಿ ವಾರ, ನಾನು ಆಯುರ್ವೇದ ತಜ್ಞರಿಂದ ಪಂಚಕರ್ಮ ಚಿಕಿತ್ಸೆಯನ್ನು ಪಡೆಯುತ್ತೇನೆ. ಸೈಕ್ಲಿಂಗ್ ಮತ್ತು ಈಜು ಸೇರಿದಂತೆ ನನ್ನ ದೈಹಿಕ ವ್ಯಾಯಾಮ ಮಾಡುತ್ತಿದ್ದೇನೆ. ಈಗ ನಾನು 112 ಕೆಜಿ ಇದ್ದು, 100 ಕೆಜಿಗಿಂತ ಕಡಿಮೆ ತೂಕಕ್ಕೆ ಇಳಿಯಬೇಕು ಎಂದು ಸಕಲ್ಪ ಮಾಡಿದ್ದೇನೆಎಂದು ಅನಿಲ್ ಫಿರೋಜಿಯಾ ಹೇಳಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇತ್ತೀಚಿನ ರಾಜಕೀಯ ಬೆಳವಣಿಗೆ ಬಗ್ಗೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಜೊತೆ ಮಾತನಾಡಿದ ಏಕನಾಥ್ ಶಿಂಧೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ