ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯ ತಂತ್ರಜ್ಞಾನದ ರಾಯಭಾರಿಯಾಗಿ ಭಾರತದ ಅಮನ್ ದೀಪ್ ಗಿಲ್‌ ನೇಮಕ

ನ್ಯೂಯಾರ್ಕ್​: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ತಂತ್ರಜ್ಞಾನದ ರಾಯಭಾರಿಯಾಗಿ ಅಮನ್ ದೀಪ್ ಸಿಂಗ್ ಗಿಲ್ ಅವರನ್ನು ನೇಮಿಸಲಾಗಿದೆ.
ಭಾರತೀಯ ರಾಜತಾಂತ್ರಿಕ ಹಿರಿಯ ಅಧಿಕಾರಿಯಾಗಿರುವ ಅಮನ್​ ದೀಪ್​ ಅವರಿಗೆ ಈ ಸ್ಥಾನ ನೀಡಲಾಗಿದೆ. ಭಾರತದ ರಾಯಭಾರಿಯಾಗಿದ್ದ ಗಿಲ್, 2016 ರಿಂದ 2018ರವರೆಗೆ ಜಿನಿವಾದಲ್ಲಿನ ನಿಶಸ್ತ್ರೀಕರಣ ಸಮ್ಮೇಳನದ ಶಾಶ್ವತ ಪ್ರತಿನಿಧಿಯಾಗಿದ್ದರು.

ಸದ್ಯ ಆಂಟೋನಿಯೊ ಗುಟೆರೆಸ್ ತಂತ್ರಜ್ಞಾನ ರಾಯಭಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಪಂಜಾಬ್ ವಿವಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರೀಕಲ್ ಕಮ್ಯೂನಿಕೇಷನ್ ತಂತ್ರಜ್ಞಾನದಲ್ಲಿ ಪದವಿ ಪಡೆದಿರುವ ಗಿಲ್, ಲಂಡನ್ ನ ಕಿಂಗ್ಸ್ ಕಾಲೇಜಿನಿಂದ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ಜಿನಿವಾ ವಿವಿಯಿಂದ ಫ್ರೆಂಚ್ ಇತಿಹಾಸ ಮತ್ತು ಭಾಷೆಯಲ್ಲಿ ಡಿಪ್ಲೋಮಾ ಪಡೆದಿದ್ದಾರೆ.

ಈ ಹಿಂದೆ, ಗಿಲ್ ಅವರು ಡಿಜಿಟಲ್ ಸಹಕಾರದ (2018-2019) ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಉನ್ನತ ಮಟ್ಟದ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಹ-ನಾಯಕರಾಗಿದ್ದರು.
ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಗತಿ ಹಾಗೂ ಪರಿಣಾಮಕಾರಿ ಡಿಜಿಟಲ್​ ತಂತ್ರಜ್ಞಾನದಲ್ಲಿ ಹೆಚ್ಚು ಜ್ಞಾನ ಹೊಂದಿರುವ ಅಮನ್​ ದೀಪ್​ ಅವರನ್ನು ಡಿಜಿಟಲ್ ತಂತ್ರಜ್ಞಾನ ಕುರಿತ ಚಿಂತನೆಯ ನಾಯಕ ಎಂದು ವಿಶ್ವಸಂಸ್ಥೆ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement