ಇನ್ನೇನು ಮಗು ಬಸ್‌ ಟೈರ್‌ ಅಡಿ ಸಿಲುಕೇ ಬಿಡ್ತು ಅನ್ನುವಷ್ಟರಲ್ಲಿ ಆಪಾದ್ಬಾಂಧವರಾದ ಟ್ರಾಫಿಕ್‌ ಪೊಲೀಸ್‌, ಬಸ್‌ ಚಾಲಕ… ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಿಸಿಲಿನ ತಾಪವಿರಲಿ, ಚಳಿಯಾಗಿರಲಿ ಅಥವಾ ಜೋರು ಮಳೆಯಾಗಲಿ ಸಂಚಾರಿ ಪೊಲೀಸ್ ಸಿಬ್ಬಂದಿ ಸಿಗ್ನಲ್‌ನಲ್ಲಿ ನಿಂತು ದಿನವಿಡೀ ಟ್ರಾಫಿಕ್ ಅನ್ನು ನಿರ್ವಹಿಸುತ್ತಾರೆ. ಸಿಗ್ನಲ್‌ನಲ್ಲಿ ನಿಂತಿರುವ ಟ್ರಾಫಿಕ್ ಪೋಲೀಸರು ಸುತ್ತಲೂ ತೀವ್ರ ನಿಗಾ ಇಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಉತ್ತಮ ನಿದರ್ಶನ. ವಾಹನ ನಿಬಿಡ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಆಟೋದಿಂದ ಮಗುವೊಂದು ರಸ್ತೆಗೆ ಬಿದ್ದಿದ್ದು, ಸಂಚಾರಿ ಪೊಲೀಸ್‌ ಹಾಗೂ ಬಸ್‌ ಚಾಲಕನ ಜಾಗರೂಕತೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಟ್ರಾಫಿಕ್ ಪೊಲೀಸರ ಹೆಸರು ಸುಂದರ್ ಲಾಲ್ ಎಂದು ಹೇಳಲಾಗುತ್ತಿದೆ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸುಂದರ್ ಲಾಲ್ ಹಾಗೂ ಬಸ್‌ ಚಾಲಕ ಸಮಯ ಪ್ರಜ್ಞೆ ಮೆರೆದ ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್‌ ಪೇದೆ ಸುಂದರ್ ಲಾಲ್ ಸರ್ಕಲ್‌ನಲ್ಲಿ ತನ್ನ ಟ್ರಾಫಿಕ್‌ ಕರ್ತವ್ಯದಲ್ಲಿದ್ದು ವಾಹನಗಳಿಗೆ ನಿರ್ದೇಶನ ನೀಡುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಆಗ ಒಂದು ಕಡೆಯಿಂದ ಆಟೋವೊಂದು ರಸ್ತೆಯಲ್ಲಿ ಟರ್ನ್‌ ತೆಗೆದುಕೊಳ್ಳುತ್ತಿರುವಾಗ ಆಟೋದಲ್ಲಿದ್ದ ತಾಯಿಯ ಮಡಿಲಿಂದ ಪುಟ್ಟ ಮಗು ರಸ್ತೆ ಮಧ್ಯವೇ ಕೈಯಿಂದ ಜಾರಿ ಬಿದ್ದಿದೆ. ಆಗ ಅತ್ತ ಕಡೆಯಿಂದ ಬಸ್ ಬರುತ್ತಿದೆ. ಮಗು ಮತ್ತು ಬಸ್ಸಿನ ನಡುವಿನ ಅಂತರ ತುಂಬಾ ಕಡಿಮೆ ಇತ್ತು

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

ಜವಾನ್ ಸುಂದರ್ ಲಾಲ್ ಅವಸರವಸರವಾಗಿ ಬಸ್ಸನ್ನು ನಿಲ್ಲಿಸುವಂತೆ ಸೂಚಿಸಿ ಓಡಿಹೋಗಿ ಮಗುವನ್ನು ರಸ್ತೆಯಿಂದ ಎತ್ತಿಕೊಂಡು ಬಂದಿದ್ದಾನೆ, ಬಸ್‌ ಚಾಲಕ ಸಹ ಮಗು ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ತಕ್ಷಣವೇ ಬಸ್‌ ನಿಲ್ಲಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ಪೊಲೀಸ್ ಜವಾನ್ ಸುಂದರ್ ಲಾಲ್ ಅವರನ್ನು ಬಳಕೆದಾರರು ಸಾಕಷ್ಟು ಹೊಗಳುತ್ತಿದ್ದಾರೆ.
ಟ್ರಾಫಿಕ್‌ ಪೊಲೀಸ್‌ ಹಾಗೂ ಬಸ್‌ ಚಾಲಕ ಕಾರ್ಯಪ್ರವೃತ್ತವಾಗಲು ಸ್ವಲ್ಪ ವಿಳಂಬವಾಗಿದ್ದರೂ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದಿತ್ತು. ಅದನ್ನು ಅವರು ತಪ್ಪಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement