ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಕೈಯಲ್ಲಿದ್ದ 40 ದಿನದ ಮಗುವನ್ನು ಕಿತ್ತುಕೊಂಡು ಪರಾರಿಯಾದ ಖದೀಮರು

ಹುಬ್ಬಳ್ಳಿ: ತಾಯಿ ಕೈಯಲ್ಲಿದ್ದ 40 ದಿನದ್ದು ಎಂದು ಹೇಳಲಾದ ಮಗುವನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ನಗರದ ಕಿಮ್ಸ್‌ ಆಸ್ಪತ್ರೆಯ ಮಕ್ಕಳ ವಾರ್ಡ್‌ ಬಳಿ ನಡೆದ ಬಗ್ಗೆ ವರದಿಯಾಗಿದೆ.
ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಗುವಿನ ಆರೋಗ್ಯ ಸುಧಾರಿಸಿದ್ದರಿಂದ ಮಗುವನ್ನು ವೈದ್ಯರು ಇಂದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರಂತೆ. ಮಗುವನ್ನು ಎತ್ತಿಕೊಂಡು ವಾರ್ಡ್‌ನಿಂದ ಹೊರಗಡೆ ಬಂದಾಗ ಬಿಳಿ ಬಣ್ಣದ ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಕಿತ್ತುಕೊಂಡು ಓಡಿ ಹೊಗಿದ್ದಾನೆ’ ಎಂದು ತಾಯಿ ಸಲ್ಮಾ ಆರೋಪಿಸಿದ್ದಾರೆ.

ಕುಂದಗೋಳದ ನೆಹರು ನಗರದ ನಿವಾಸಿಯಾಗಿರುವ ಸಲ್ಮಾ ಅವರು ಮಗುವಿನ ಮೆದುಳಿನಲ್ಲಿ ನೀರು ತುಂಬಿದೆ ಎಂದು 14 ದಿನಗಳ ಹಿಂದೆ ಕಿಮ್ಸ್‌ನ ಮಕ್ಕಳ ವಾರ್ಡ್‌ನಲ್ಲಿ ದಾಖಲಿಸಿದ್ದರು.
ಮೆದುಳಿನ ತೊಂದರೆಯಿದ್ದ ಕಾರಣ ಮಗು ವಾಂತಿ ಮಾಡಿಕೊಳ್ಳುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಮಗುವನ್ನು ಮಧ್ಯಾಹ್ನ 1 ಗಂಟೆ ವೇಳೆ ಬಿಡುಗಡೆ ಮಾಡಿದ್ದೇವೆ. ತಾಯಿ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯ ಗೇಟ್‌ಗೆ ಬಂದಿದ್ದಾರೆ. ಆ ವೇಳೆ ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದಾನೆ ಎಂದು ದೂರಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಸಿ. ಅರುಣಕುಮಾರ ತಿಳಿಸಿದ್ದಾರೆ.
ಮಗು ಕಳವು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಲಾಭೂರಾಮ ಹಾಗೂ ಹಿರಿಯ ಅಧಿಕಾರಿಗಳು ಕಿಮ್ಸ್‌ಗೆ ಧಾವಿಸಿ ಎಲ್ಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement