ಅಪರೂಪದ ಘಟನೆ…..ಗಟಾರದಲ್ಲಿದ್ದ ಇಲಿಗಳ ಬಾಯಲ್ಲಿ 5 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ…!

ಮುಂಬೈ: ವಿಲಕ್ಷಣ ಘಟನೆಯೊಂದರಲ್ಲಿ, ಮುಂಬೈನ ಗೋಕುಲಧಾಮ್ ಕಾಲೋನಿ ಬಳಿಯ ಗಟಾರದಲ್ಲಿದ್ದ ಇಲಿಗಳಿಂದ 5 ಲಕ್ಷ ರೂಪಾಯಿ ಮೌಲ್ಯದ 10 ತೊಲ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಜಿ ಘಾರ್ಗೆ ಗುರುವಾರ ತಿಳಿಸಿದ್ದಾರೆ.
ಕೆಲವು ಇಲಿಗಳು ಕಸದ ರಾಶಿಯಿಂದ ಚಿನ್ನದ ಚೀಲವನ್ನು ಗಟಾರಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್‌ಐ ತಿಳಿಸಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಎಸ್‌ಐ ಪ್ರಕಾರ, ಮಹಿಳೆಯೊಬ್ಬರು ಚಿನ್ನಾಭರಣವನ್ನು ಬ್ಯಾಂಕ್‌ಗೆ ಠೇವಣಿ ಇಡಲು ಹೋಗುತ್ತಿದ್ದಾಗ ಅದನ್ನು ವಡಾ ಪಾವ್ ಎಂದು ತಪ್ಪಾಗಿ ಗ್ರಹಿಸಿ ಬೀದಿಯಲ್ಲಿ ಮಕ್ಕಳಿಗೆ ನೀಡಿದ್ದರು. ನಂತರ, ಮಕ್ಕಳು ಆಭರಣದ ಚೀಲವನ್ನು ಕಸದ ರಾಶಿಯಲ್ಲಿ ಎಸೆದರು. ತನ್ನ ಬ್ಯಾಗ್ ಕಳೆದುಹೋಗಿರುವುದನ್ನು ಅರಿತ ಮಹಿಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇದು ಗೊತ್ತಾಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ಓದಿರಿ :-   ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು 19 ಸಾವು
advertisement

ನಿಮ್ಮ ಕಾಮೆಂಟ್ ಬರೆಯಿರಿ