ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡು ಪತ್ತೆ: ಅಮೆರಿಕಾ ಪ್ರಜೆ ಬಂಧನ

posted in: ರಾಜ್ಯ | 0

ಬೆಂಗಳೂರು: ಬ್ಯಾಗ್‌ನಲ್ಲಿ ಸಜೀವ ಗುಂಡನ್ನು ಇಟ್ಟುಕೊಂಡು ಬಂದಿದ್ದ ಅಮೆರಿಕಾ ಮೂಲದ ಪ್ರಜೆಯನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಪಾಸಣೆ ವೇಳೆ ಸಜೀವ ಗುಂಡು ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಅಮೆರಿಕದ ಟೆಕ್ಸಾಸ್ ಮೂಲದ ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬುವವರು ಕೌಬಾಯ್ ಅಸಾಲ್ಟ್ ರೈಫಲ್‌ ನ ಗುಂಡನ್ನು ತಮ್ಮ ಬ್ಯಾಗ್‌ನಲ್ಲಿಟ್ಟು ಸಂಜೆ 5:55ಕ್ಕೆ ಬೆಂಗಳೂರಿನಿಂದ ಕೋಲ್ಕತ್ತಾಗೆ ಹೊರಡುವ ಏರ್‌ ಏಷ್ಯಾ ಇಂಡಿಯಾ ವಿಮಾನವೇರಲು ಬಂದಿದ್ದರು. ಈ ವೇಳೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅವರಲ್ಲಿ 30 ಎಂಎಂ ಕ್ಯಾಲಿಬರ್ ಸಜೀವಗುಂಡು ಇರುವುದು ಪತ್ತೆಯಾಗಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ವಿಚಾರಣೆ ವೇಳೆ ಅವರು ಕೋಲ್ಕತ್ತಾದಲ್ಲಿ ನಡೆಯಲಿದ್ದ ಅಧಿಕೃತ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದು, ಬಂದೂಕು ಪರವಾನಿಗೆಯನ್ನೂ ಹೊಂದಿದ್ದರು. ಆದರೆ ಭಾರತದಲ್ಲಿನ ವಿಮಾನ ನಿಲ್ದಾಣಗಳ ಕಾನೂನಿನಡಿ ಇಂತಹವುಗಳನ್ನು ಸಾಗಿಸಲು ಅಗತ್ಯ ದಾಖಲೆಗಳು ಬೇಕಾಗಿದ್ದು, ಅವರ ಬಳಿ ಅಂತಹ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ನಿಮ್ಮ ಕಾಮೆಂಟ್ ಬರೆಯಿರಿ