ರಾಯಚೂರು: ಕಲುಷಿತ ನೀರು ಸರಬರಾಜು ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

posted in: ರಾಜ್ಯ | 0

ರಾಯಚೂರು: ಕಲುಷಿತ ನೀರು ಸೇವನೆ ಪ್ರಕರಣದಲ್ಲಿ ರಾಯಚೂರಿನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈಗ ಇದರಿಂದ ಮತ್ತೊಬ್ಬರು ಸಾವಿಗೀಡಾಗಿದ್ದು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಮಚ್ಚಿಬಜಾರ್ ನಿವಾಸಿ ಶಮೀಮ್ ಬೇಗಂ(48) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ವಾಂತಿ, ಭೇದಿ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ, ಮೇ 29ರಂದು ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಹಾಗೂ ಇದು ತಡವಾಗಿ ಬೆಳಕಿಗೆ ಬಂದಿದೆ.

advertisement

ರಾಂಪುರ ಜಲಾಶಯದಿಂದ ನಗರದ 14 ವಾರ್ಡ್​ಗಳಿಗೆ ನೀರನ್ನು ಶುದ್ಧೀಕರಿಸದೆ ಪೂರೈಕೆ ಮಾಡಿದ್ದು, ಈ ನೀರು ಕುಡಿದ ಹಲವರ ಆರೋಗ್ಯ ಹದಗೆಟ್ಟಿದೆ. ಈ ನೀರನ್ನು ಕುಡಿದ ನೂರಾರು ಮಂದಿ ಅಸ್ವಸ್ಥಗೊಂಡ ನಂತರ ಮೇ 31ರಂದು ಇದು ಬೆಳಕಿಗೆ ಬಂದಿತ್ತು.
ಮೇ 31ರಂದು ರಾಯಚೂರಿನ ಇಂದಿರಾ ನಗರದ ನಿವಾಸಿಗಳು ಕಲುಷಿತ ನೀರು ಕುಡಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು ಹಾಗೂ 60ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಜಿಲ್ಲೆಯ ರಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿರಾನಗರದ ಮಲ್ಲಮ್ಮ (40) ಮೊದಲು ಮೃತಪಟ್ಟಿದ್ದರು. ನಂತರ ಅಬ್ದುಲ್ ಗಫೂರ್(37), ಮಹ್ಮದ್​ ನೂರ್(43), ಅಬ್ದುಲ್ ಕರೀಂ, ಜನಕರಾಜ (48) ಹಾಗೂ ನಯೀಮುದ್ದೀನ್​ ಮೃತಪಟ್ಟಿದ್ದರು.ಈಗ ಶಮೀಮ್​ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇವರು ಮಲ್ಲಮ್ಮ ಮೃತಪಡುವ ಮೊದಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಸಾಹಿತ್ಯ ವಿಮರ್ಶಕ ಪ್ರೊ. ಎಂ.ಎಚ್​.ಕೃಷ್ಣಯ್ಯ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement