ಅಗ್ನಿಪಥ ಯೋಜನೆ: ಈ ವರ್ಷದ ಸೇನಾ ನೇಮಕಾತಿ ವಯಸ್ಸಿನ ಮಿತಿ 21 ರಿಂದ 23ಕ್ಕೆ ಹೆಚ್ಚಿಸಿದ ಸರ್ಕಾರ

ನವದೆಹಲಿ: ಅಗ್ನಿಪಥ ಯೋಜನೆಯಡಿ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು ಕೇಂದ್ರ ಸರ್ಕಾರ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ.
ಮಂಗಳವಾರ ಅಗ್ನಿಪಥ ಯೋಜನೆಯನ್ನು ಘೋಷಿಸುವಾಗ, 17.5 ಮತ್ತು 21 ವರ್ಷದೊಳಗಿನ ನಾಗರಿಕರು ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ “ಟೂರ್ ಆಫ್ ಡ್ಯೂಟಿ” ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಹೇಳಿತ್ತು. ಟೂರ್ ಆಫ್ ಡ್ಯೂಟಿಯನ್ನು ಪೂರ್ಣಗೊಳಿಸಿದವರಲ್ಲಿ ಶೇಕಡಾ 25 ರಷ್ಟು ಜನರು ಸಾಮಾನ್ಯ ಸಿಬ್ಬಂದಿಯಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅದು ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಸೇವೆಗಳಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ ವಯೋಮಿತಿಯಲ್ಲಿ ಒಂದು ಬಾರಿ ವಿನಾಯಿತಿ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

ಆದಾಗ್ಯೂ, ಅಲ್ಪಾವಧಿಯ ನೇಮಕಾತಿಗಳು ಅಥವಾ ಅಗ್ನಿವೀರರು ಪಿಂಚಣಿ ಅಥವಾ ಗ್ರಾಚ್ಯುಟಿ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ ಮತ್ತು ಅವರ ಸೇವೆಯ ಕೊನೆಯಲ್ಲಿ 11.71 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಬಿಹಾರ, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ನೇಮಕಾತಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಈ ಕ್ರಮವು ಬಂದಿದೆ.
ಕೆಲವು ಪ್ರತಿಭಟನಾಕಾರರು ಸಶಸ್ತ್ರ ಪಡೆಗಳಲ್ಲಿ ಹಳೆಯ ನೇಮಕಾತಿ ವಿಧಾನವನ್ನು ಮರುಸ್ಥಾಪಿಸುವಂತೆ ಕೋರಿದರೆ, ಕೆಲವರು ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ಅವಧಿ ಮುಗಿದ ನಂತರ ಉದ್ಯೋಗಗಳಲ್ಲಿ ಮೀಸಲಾತಿಗೆ ಒತ್ತಾಯಿಸಿದರು.
ಹಿಂದೆ, ಸೈನಿಕರನ್ನು ಸಶಸ್ತ್ರ ಪಡೆಗಳು 17 ವರ್ಷಗಳ ಅವಧಿಗೆ ನೇಮಿಸಿಕೊಳ್ಳುತ್ತಿದ್ದವು, ಅಗ್ನಿಪಥ ಯೋಜನೆಯಲ್ಲಿಯೂ ಇದನ್ನು ಕೆಲವು ಸಿಬ್ಬಂದಿಗೆ ವಿಸ್ತರಿಸಬಹುದಾಗಿದೆ.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ಬಿಹಾರದಲ್ಲಿ, ಕೆಲವು ಪ್ರತಿಭಟನಾಕಾರರು ಭಬುವಾ ಮತ್ತು ಛಪ್ರಾ ನಗರಗಳಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದರು. ಕೆಲವೆಡೆ ಪ್ರತಿಭಟನಾಕಾರರು ರೈಲು, ಬಸ್‌ಗಳ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ.
ನವಾಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಪ್ರತ್ಯೇಕ ಘಟನೆಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕಿ ಅರುಣಾ ದೇವಿ ಅವರ ಕಾರಿಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ದಾಳಿಯಲ್ಲಿ ಶಾಸಕಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ರಾಜಸ್ಥಾನದಲ್ಲಿ ಸಶಸ್ತ್ರ ಪಡೆಗಳ ಹುದ್ದೆಗಳ ಆಕಾಂಕ್ಷಿಗಳು ಜೋಧ್‌ಪುರ, ಸಿಕರ್, ಜೈಪುರ, ನಾಗೌರ್, ಅಜ್ಮೀರ್ ಮತ್ತು ಜುಂಜುನು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು. ಹನುಮಾನ್ ಬೇನಿವಾಲ್ ನೇತೃತ್ವದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸದಸ್ಯರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಪ್ರತಿಭಟನೆ ನಡೆದ ಸ್ಥಳಗಳಲ್ಲಿ ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದರು.
ಹರಿಯಾಣದ ಪಲ್ವಾಲ್ ನಗರದಲ್ಲಿ, ಕೆಲವು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಕಲ್ಲುಗಳನ್ನು ಎಸೆದರು ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಪ್ರತಿಭಟನೆಯನ್ನು ಹತೋಟಿಗೆ ತರಲು ಪೊಲೀಸರು ಗುಂಡು ಹಾರಿಸಿದರು. ನಗರದಲ್ಲಿ ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿತ್ತು.

ಪ್ರಮುಖ ಸುದ್ದಿ :-   ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement