ಬೆಂಗಳೂರು: ಯುವ ನಟ ಸತೀಶ ವಜ್ರ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತೀಶ್ ವಜ್ರ ಅವರ ಭಾಮೈದ ಸುದರ್ಶನ ಹಾಗೂ ನಾಗೇಂದ್ರ ಎಂಬವರನ್ನು ಪೋಲಿಸರು ಬಂಧಿಸಿದ್ದಾರೆ.
ಯುವ ನಟ ಸತೀಶ್ ವಜ್ರ ಕೊಲೆ ಸಂಬಂಧ ಘಟನೆ ನಡೆದ ಕೆಲವೇ ಸಮಯದಲ್ಲಿ ಇಬ್ಬರು ಆರೋಪಿಗಳನ್ನ ಆರ್.ಆರ್ ನಗರ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/ಕೊಲೆಯಾದ ಸತೀಶ ವಜ್ರನ ಹೆಂಡ್ತಿ ಕೆಲ ದಿನಗಳ ಹಿಂದೆ ಹೃದಯದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ ಎಂದು ಸುದರ್ಶನ ಬಾವನ ಮೇಲೆ ಕೋಪಗೊಂಡಿದ್ದ ಹಾಗೂ ಸತೀಶ್ ಪತ್ನಿ ಸಾವಿನ ನಂತರ ಸತೀಶ ಅವರ ಪುಟ್ಟ ಮಗು ಯಾರ ಬಳಿ ಇರಬೇಕು ಎಂಬುದರ ಬಗ್ಗೆಯೂ ಜಗಳವಾಗ್ತಿತ್ತು ಎನ್ನಲಾಗಿದೆ.
ನಿನ್ನೆ, ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಸತೀಶ ಮನೆಗೆ ತನ್ನ ಸಂಬಂಧಿ ನಾಗೇಂದ್ರನನ್ನ ಕರೆದೊಯ್ದಿದ್ದ ಬಾಮೈದ ಸುದರ್ಶನ, ಮಗು-ತಂಗಿ ಸಾವಿನ ಕುರಿತಾಗಿ ಮತ್ತೆ ಜಗಳವಾಡಿದ್ದು, ಇದು ವಿಕೋಪಕ್ಕೆ ಹೋಗಿ ಆರೋಪಿ ಸುದರ್ಶನ ತನ್ನ ಬಾವನನ್ನೇ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಗಳನ್ನ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ