ಪ್ರಧಾನಿ ಮೋದಿ ಹಾದು ಹೋಗುವ ರಸ್ತೆಗಳಲ್ಲಿರುವ ಕಾಲೇಜುಗಳಿಗೆ ರಜೆ : ಡಿಕೆಶಿ ಆಕ್ಷೇಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುವ ರಸ್ತೆಗಳಲ್ಲಿರುವ ಕಾಲೇಜುಗಳಿಗೆ ರಜೆ ನೀಡಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿರುವ ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು, ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳನ್ನು ಏಕೆ ಅನುಮಾನದಿಂದ ನೋಡುತ್ತೀರಿ. ನಮ್ಮ ವಿದ್ಯಾರ್ಥಿಗಳೇನೂ ಭಯೋತ್ಪಾದಕರಾ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿಗಳು ಓಡಾಡುವ ರಸ್ತೆಗಳಲ್ಲಿ ಯಾವ ರೀತಿ ಭದ್ರತೆ ನೀಡಬೇಕೋ ಆ ರೀತಿ ಭದ್ರತೆ ವ್ಯವಸ್ಥೆ ಮಾಡಿ, ಆದರೆ, ಶಾಲಾ-ಕಾಲೇಜುಗಳಿಗೆ ರಜೆ ಕೊಡುವುದು ಯಾಕೆ ಎಂದು ಆಕ್ಷೇಪಿಸಿದ್ದಾರೆ.
ಅಗ್ನಿಪಥ ವಿರುದ್ಧ ಕೆಂಡ ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಕಿಡಿಕಾರಿದ ಅವರು, ಮಂತ್ರಿಗಳು ಮತ್ತು ಅವರ ಮಕ್ಕಳನ್ನು ಅಗ್ನಿಪಥ ಯೋಜನೆಗೆ ಕಳುಹಿಸಲಿ ನೋಡೋಣ ಎಂದು ಸವಾಲು ಹಾಕಿದರು. ಮಂತ್ರಿಗಳ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು. ಆದರೆ, ಬಡವರ ಮಕ್ಕಳು ಮಾತ್ರ ಸೆಕ್ಯೂರಿಟಿಗಾರ್ಡ್ ಆಗಬೇಕಾ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement