ಜಲಾವೃತವಾಗಿದ್ದ ಮ್ಯಾನ್‌ಹೋಲ್‌ಗೆ ಬಿದ್ದ ಸ್ಕೂಟರ್‌ನಲ್ಲಿದ್ದ ಪೊಲೀಸ್ ಅಧಿಕಾರಿ-ಪತ್ನಿ, ಗಾಯ | ವೀಕ್ಷಿಸಿ

ಅಲಿಗಢ: ಉತ್ತರ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಿದ್ದು, ಅಲಿಗಢ ನಗರದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಮಳೆ ನೀರಿನಿಂದ ತುಂಬಿದ್ದ ರಸ್ತೆ ಪಕ್ಷದ ತೆರೆದ ಮ್ಯಾನ್‌ ಹೋಲ್‌ಗೆ ಬೀಳುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ. ಸಮೀಪದಲ್ಲಿದ್ದ ಜನರು ಅವರನ್ನು ರಕ್ಷಿಸಿದ್ದಾರೆ.

ದಂಪತಿ ಜಲಾವೃತವಾದ ರಸ್ತೆಯ ಮೇಲೆ ಬೈಕ್ ಚಲಾಯಿಸುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬೀಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಸ್ಕೂಟರ್‌ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಅವರು ವೈದ್ಯರನ್ನು ನೋಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಅಲಿಘರ್‌ನಲ್ಲಿ ಅಪಘಾತಕ್ಕೀಡಾದ ದಂಪತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ ಎಂದು ಪತ್ರಕರ್ತ ಪಿಯೂಷ್ ರೈ ಟ್ವೀಟ್ ಮಾಡಿದ್ದಾರೆ. ಇಂತಹ ಘಟನೆಗಳು ನಡೆಯುತ್ತಿದ್ದರೆ ಅಲಿಘರ್ ಸ್ಮಾರ್ಟ್ ಸಿಟಿ ಆಗಿದ್ದು ಹೇಗೆ ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಆಂತರಿಕ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡಿರುವ ಪತಿ ದಯಾನಂದ್ ಸಿಂಗ್ ಅತ್ರಿ ಅವರು, ಒಳಚರಂಡಿ ಮಾರ್ಗಗಳು ಎಲ್ಲೆಂದರಲ್ಲಿ ತೆರೆದು ಉಸಿರುಗಟ್ಟಿವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement