ಅಗ್ನಿಪಥ ನೇಮಕಾತಿ ವಿರೋಧಿಸಿ ಪ್ರತಿಭಟನೆಗಳ ನಡುವೆ ಅಗ್ನಿವೀರ್‌ಗಳಿಗೆ ಉದ್ಯೋಗದ ಆಫರ್‌ ನೀಡಿದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ

ನವದೆಹಲಿ:ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ತಮ್ಮ ಕಂಪನಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಅಗ್ನಿವೀರ್‌ಗಳಿಗೆ ಉದ್ಯೋಗಾವಕಾಶವನ್ನು ನೀಡುವುದಾಗಿ ಸೋಮವಾರ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ತಿಳಿಸಿದ್ದಾರೆ. ಕೇಂದ್ರದ ಹೊಸ ಸೇನಾ ನೇಮಕಾತಿ ಯೋಜನೆಯಾದ ‘ಅಗ್ನಿಪಥ’ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆ, ಕೈಗಾರಿಕೋದ್ಯಮಿ ಆನಂದ ಮಹೀಂದ್ರಾ ಅವರು ಹಿಂಸಾಚಾರದಿಂದ ದುಃಖಿತರಾಗಿವುದಾಗಿ ತಿಳಿಸಿದ್ದಾರೆ ಮತ್ತು ಅಗ್ನಿವೀರ್‌ಗಳ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು “ಉತ್ತಮ ಉದ್ಯೋಗಿಗಳಾಗಿ” ಮಾಡುತ್ತವೆ ಎಂದು ಒತ್ತಿ ಹೇಳಿದ್ದಾರೆ
ಈ ಯೋಜನೆಯಡಿಯಲ್ಲಿ ತರಬೇತಿ ಪಡೆದ ಜನರನ್ನು ನೇಮಿಸಿಕೊಳ್ಳುವ ಅವಕಾಶವನ್ನು ವ್ಯಾಪಾರ ಗುಂಪು ಬಯಸುತ್ತದೆ ಎಂದು ಮಹೀಂದ್ರಾ ಹೇಳಿದ್ದಾರೆ.
ಅಗ್ನೀಪಥ ಕಾರ್ಯಕ್ರಮದ ಸುತ್ತಲಿನ ಹಿಂಸಾಚಾರದಿಂದ ದುಃಖವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ-ಮತ್ತು ನಾನು ಪುನರಾವರ್ತಿಸುತ್ತೇನೆ-ಅಗ್ನಿವೀರ್‌ಗಳ ಶಿಸ್ತು ಮತ್ತು ಕೌಶಲ್ಯಗಳ ಲಾಭವು ಅವರನ್ನು ಅತ್ಯುತ್ತಮವಾಗಿ ಉದ್ಯೋಗಿಗಳನ್ನಾಗಿ ಮಾಡುತ್ತದೆ. ಅಂತಹ ತರಬೇತಿ ಪಡೆದ, ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದು ಆನಂದ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ 4 ದಿನಗಳ ಪೊಲೀಸ್ ಕಸ್ಟಡಿ

ಮಹೀಂದ್ರಾ ಅವರು ಅಗ್ನಿವೀರ್‌ಗಳನ್ನು ಯಾವ ಹುದ್ದೆಗಳಲ್ಲಿ ನೇಮಿಸಿಕೊಳ್ಳುತ್ತಾರೆ ಎಂದು ಬಳಕೆದಾರರು ಅವರನ್ನು ಕೇಳಿದಾಗ, “ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರ್‌ಗಳ ಉದ್ಯೋಗಕ್ಕೆ ದೊಡ್ಡ ಅವಕಾಶವಿದೆ. ನಾಯಕತ್ವ, ಟೀಮ್‌ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ, ಅಗ್ನಿವೀರ್‌ಗಳು ಉದ್ಯಮಕ್ಕೆ ಮಾರುಕಟ್ಟೆ-ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ. ಕಾರ್ಯಾಚರಣೆಗಳಿಂದ ಆಡಳಿತ ಮತ್ತು ಪೂರೈಕೆ ಸರಪಳಿ ನಿರ್ವಹಣೆಗೆ ಸ್ಪೆಕ್ಟ್ರಮ್ ಆಗುತ್ತಾರೆ ಎಂದು ಆನಂದ ಮಹಿಂದ್ರಾ ಹೇಳಿದ್ದಾರೆ.

17.5 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ವರೆಗೆ ನೇಮಕ ಮಾಡಿಕೊಳ್ಳುವ ಹೊಸ ಯೋಜನೆಯನ್ನು ಕೇಂದ್ರವು ಘೋಷಿಸಿದ ನಂತರ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.
ನಾಲ್ಕು ವರ್ಷಗಳ ನಂತರ, ಸುಮಾರು ₹ 12 ಲಕ್ಷ ಮೊತ್ತದೊಂದಿಗೆ 75 ಪ್ರತಿಶತದಷ್ಟು ನೇಮಕಾತಿಗಳನ್ನು ಕೈಬಿಡಲಾಗುವುದು ಆದರೆ ಯಾವುದೇ ಪಿಂಚಣಿ ಪ್ರಯೋಜನಗಳಿಲ್ಲ. 25 ಪ್ರತಿಶತದಷ್ಟು ನೇಮಕಗೊಂಡವರು 15 ವರ್ಷಗಳ ಸೇವಾವಧಿಯನ್ನು ಪೂರೈಸುತ್ತಾರೆ. ಅಧಿಕಾರಾವಧಿ ಮುಗಿದ ನಂತರ ತಾವುಏನು ಮಾಡುವುದು ಎಂಬುದರ ಕುರಿತು ಪ್ರತಿಭಟನಾಕಾರರು ಅನಿಶ್ಚಿತತೆಯನ್ನು ಉಲ್ಲೇಖಿಸಿದ್ದಾರೆ. ಅರೆಸೇನಾ ಪಡೆಗಳು ಮತ್ತು ಸರ್ಕಾರಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ಸೇರಿದಂತೆ ಕೇಂದ್ರವು ಈಗ ಹಲವಾರು ಭರವಸೆಗಳನ್ನು ನೀಡಿದೆ.
ಪ್ರತಿಭಟನೆಯ ಹೊರತಾಗಿಯೂ, ಯೋಜನೆಯನ್ನು ಹಿಂತೆಗೆದುಕೊಳ್ಳುವ ಯಾವುದೇ ಯೋಜನೆಯನ್ನು ಕೇಂದ್ರವು ತಳ್ಳಿಹಾಕಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದಕ್ಕೆ ಅಂಗಡಿಯವನ ಶಿರಚ್ಛೇದ ಮಾಡಿದ ಇಬ್ಬರ ಬಂಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ