ಕರ್ನಾಟಕದಲ್ಲಿ ಎರಡು ಕಡೆ ಸೇರಿ ದೇಶಾದ್ಯಂತ 23 ಹೊಸ ಆಸ್ಪತ್ರೆಗಳು, 62 ಡಿಸ್ಪೆನ್ಸರಿ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

posted in: ರಾಜ್ಯ | 0

ನವದೆಹಲಿ: ಕರ್ನಾಟಕದ ತುಮಕೂರು ಮತ್ತು ಉಡುಪಿ ಸೇರಿದಂತೆ ದೇಶದ ವಿವಿಧ್ಯ ರಾಜ್ಯಗಳಲ್ಲಿ 23 ಹೊಸ ಆಸ್ಪತ್ರೆ ಸ್ಥಾಪನೆ ಮತ್ತು 63 ಡಿಸ್ಪೆನ್ಸರಿಗಳನ್ನು ತೆರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ವರ್ಷದ ಅಂತ್ಯದ ಒಳಗೆ ದೇಶಾದ್ಯಂತ ವೈದ್ಯಕೀಯ ಸೌಲಭ್ಯ ಮತ್ತು ಸೇವಾ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸುವ ತೀರ್ಮಾನವನ್ನು ಇಎಸ್‌ಐಸಿಯ 188ನೇ ಸಭೆ ಭಾನುವಾರ ತೆಗೆದುಕೊಂಡಿದೆ. ಸಭೆಯಲ್ಲಿ ಈ ವರ್ಷದ ಅಂತ್ಯದೊಳಗೆ ಇಎಸ್‌ಐ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲು ನಿರ್ಧರಿಸಲಾಯಿತು.
ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಇಎಸ್‌ಐಸಿಯ 188ನೇ ಸಭೆಯಲ್ಲಿ, ದೇಶಾದ್ಯಂತ ವೈದ್ಯಕೀಯ ಸೌಲಭ್ಯ ಮತ್ತು ಸೇವಾ ಪೂರೈಕೆ ವ್ಯವಸ್ಥೆಯನ್ನು ವಿಸ್ತರಿಸಲು ನಿರ್ಧರಿಸಲಾಯಿತು. ಪ್ರಸ್ತುತ ಈ ಯೋಜನೆಯು 443 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಮತ್ತು 153 ಜಿಲ್ಲೆಗಳಲ್ಲಿ ಭಾಗಶಃ ಅನುಷ್ಠಾನಗೊಂಡಿದೆ. ಒಟ್ಟು 148 ಜಿಲ್ಲೆಗಳು ಇನ್ನೂ ಇಎಸ್‌ಐ ಯೋಜನೆಗೆ ಒಳಪಟ್ಟಿಲ್ಲ ಎಂದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ದೇಶಾದ್ಯಂತ 23 ಹೊಸ 100 ಹಾಸಿಗೆಗಳ ಆಸ್ಪತ್ರೆಗಳನ್ನು ಸ್ಥಾಪಿಸಲು ESIC ನಿರ್ಧರಿಸಿದೆ. ನೋಂದಾಯಿತ MIMP ಮತ್ತು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಗಳ ಟೈ-ಅಪ್ ಆಗಿರುವ ಆಸ್ಪತ್ರೆಗಳ ಮೂಲಕ ಹೊಸ DCBO(ಡಿಸ್ಪೆನ್ಸರಿ ಕಮ್ ಬ್ರಾಂಚ್ ಆಫೀಸ್) ಗಳನ್ನು ಸ್ಥಾಪಿಸುವ ಮೂಲಕ ವೈದ್ಯಕೀಯ ಸೇವೆ ಒದಗಿಸಲಾಗುತ್ತದೆ.. ಈಗಾಗಲೇ 157 ಜಿಲ್ಲೆಗಳಲ್ಲಿ ಇಎಸ್‌ಐ ಯೋಜನೆಯ ಫಲಾನುಭವಿಗಳು ಈ ಟೈ-ಅಪ್ ವ್ಯವಸ್ಥೆ ಮೂಲಕ ನಗದು ರಹಿತ ವೈದ್ಯಕೀಯ ಸೇವೆಯನ್ನು ಪಡೆಯುತ್ತಿದ್ದಾರೆ.
ದೇಶಾದ್ಯಂತ ಸ್ಥಾಪನೆಯಾಗಲಿರುವ 23 ಆಸ್ಪತ್ರೆಗಳ ಪೈಕಿ ಆರು ಆಸ್ಪತ್ರೆಗಳು ಮಹಾರಾಷ್ಟ್ರದ ಪಾಲ್ಘರ್, ಸತಾರಾ, ಪೆನ್, ಜಲಗಾಂವ್, ಚಕನ್ ಮತ್ತು ಪನ್ವೆಲ್ ನಲ್ಲಿ, ಹರಿಯಾಣದ ಹಿಸಾರ್, ಸೋನೆಪತ್, ಅಂಬಾಲಾ ಮತ್ತು ರೋಹ್ಟಕ್‌ನಲ್ಲಿ ನಾಲ್ಕು ಮತ್ತು ತಮಿಳುನಾಡಿನ ಚೆಂಗಲ್ಪಟ್ಟು ಮತ್ತು ಈರೋಡ್‌ನಲ್ಲಿ, ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಗೋರಖ್‌ಪುರದಲ್ಲಿ, ಮತ್ತು ಕರ್ನಾಟಕದಲ್ಲಿ ತುಮಕೂರು ಮತ್ತು ಉಡುಪಿಯಲ್ಲಿ ಆಸ್ಪತ್ರೆಗಳನ್ನು ತೆರೆಯುವುದಾಗಿ ಸರ್ಕಾರ ತಿಳಿಸಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ದತ್ತಪೀಠದಲ್ಲಿ ಪೂಜೆಗೆ ಹಿಂದೂ-ಮುಸ್ಲಿಮರಿಗೆ ಅವಕಾಶ: ಸಂಪುಟ ಉಪಸಮಿತಿ ವರದಿ ಶಿಫಾರಸಿಗೆ ಸಂಪುಟ ಸಭೆ ಒಪ್ಪಿಗೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ