ಕಾಶ್ಮೀರ : ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಕಾಶ್ಮೀರ : ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಹತರಾದ ಉಗ್ರರ ಸಂಖ್ಯೆ 7ಕ್ಕೆ ಏರಿದೆ.
ಉತ್ತರ ಕಾಶ್ಮೀರದ ಕಪ್ಪಾರ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಮತ್ತೆ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್ಕೌಂಟರ್‍ನಲ್ಲಿ ಅಪರಿಚಿತ ಉಗ್ರನೊಬ್ಬ ಸಾವಿಗೀಡಾಗಿದ್ದಾನೆ. ವರದಿಗಳು ಬಂದಾಗ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹತರಾದ ಉಗ್ರರ ಬಳಿಯಿದ್ದ ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ; ಪಾಕ್‌ಗೆ ಬೆಂಬಲಿಸಿದ ಟರ್ಕಿ : ಭಾರತದಿಂದ ಹೊರದಬ್ಬಿದ ಒಂದೇ ದಿನದಲ್ಲಿ ಟರ್ಕಿ ಕಂಪನಿಗೆ ₹4700 ಕೋಟಿ ನಷ್ಟ !

ನಿಮ್ಮ ಕಾಮೆಂಟ್ ಬರೆಯಿರಿ

advertisement