ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಮೈಸೂರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ 15 ಸಾವಿರ ಜನರಿಂದ ಯೋಗ

ಮೈಸೂರು: ‘ಮಾನವೀಯತೆಗಾಗಿ ಯೋಗ’ ಘೋಷವಾಕ್ಯದಡಿ ನಗರದ ಅರಮನೆ ಆವರಣದಲ್ಲಿ ಇಂದು, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಮಾಡಿ ಗಮನಸೆಳೆದರು.

ಸರಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಅರಮನೆ ಆವರಣದಲ್ಲಿ ಯೋಗಾಭ್ಯಾಸ ಮಾಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಬೆಳಿಗ್ಗೆ 7 ಗಂಟೆಗೆ ಶುರುವಾದ ಪ್ರದರ್ಶನ 7:45ರ ವರೆಗೂ ನಡೆಯಿತು. ಪ್ರಧಾನಿ ಮೋದಿ ಅವರೊಂದಿಗೆ ಸುಮಾರು 15 ಸಾವಿರ ಜನರು ಯೋಗ ಮಾಡಿದ್ದು, ಇದರಲ್ಲಿ 1200 ಶಾಲಾ ಮಕ್ಕಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಆರೋಗ್ಯ ಸಚಿವ ಡಾ.ಸುಧಾಕರ, ಸಂಸದ ಪ್ರತಾಪ್ ಸಿಂಹ, ರಾಣಿ ಪ್ರಮೋದಾದೇವಿ, ಯದುವೀರ , ಶಾಸಕ ಎಲ್ ನಾಗೇಂದ್ರ, ಎಸ್.ಎ ರಾಮದಾಸ್, ಮೂಡಾ ಅಧ್ಯಕ್ಷ ಎಂವಿ ರಾಜೀವ್ ಅವರು ಕೂಡ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಮೋದಿ ನೇತೃತ್ವದಲ್ಲಿ 45 ನಿಮಿಷ ಕಾಲ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 15 ಸಾವಿರ ಜನ ಯೋಗ ಮಾಡಿ ಗಮನ ಸೆಳೆದರು.ಒಟ್ಟು 19 ಆಸನಗಳು ಪ್ರದರ್ಶನಗೊಂಡವು. ಇದರಲ್ಲಿ ಆರಂಭದಲ್ಲಿ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷಗಳ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ಸಮದಂಡಾಸನ, ಭದ್ರಾಸನ, , ಅರ್ಧಉಷ್ಟ್ರಾಸನ, ವಜ್ರಾಸನಉಷ್ಟ್ರಾಸನ, ತ್ರಿಕೋನಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಮಾಡಲಾಯಿತು. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ. ಶಾಂತಿಮಂತ್ರ, ಸಂಕಲ್ಪ ನಡೆಯಿತು.

ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇಂದು ವಿಶ್ವದಲ್ಲಿರುವ ಪ್ರತಿ ಮನೆ ಮನೆಗೂ ಯೋಗ ತಲುಪಿದೆ. ಯೋಗವೆಂಬುದು ಸಹಜ ಮಾನವೀಯ ಚೈತನ್ಯವಾಗಿದೆ. ಕೊರೊನಾ ನಂತರ ಎರಡು ವರ್ಷಗಳ ಬಳಿಕ ಮತ್ತೆ ಯೋಗ ಪರ್ವ ಆರಂಭವಾಗಿದೆ ಎಂದರು.
ಯೋಗವು ವ್ಯಕ್ತಿಗೆ ಶಾಂತಿ ಹಾಗೂ ಸಮಾಧಾನವನ್ನು ನೀಡುತ್ತದೆ. ಶಾಂತಿ ಎನ್ನುವುದು ವ್ಯಕ್ತಿಗೆ ಸೀಮಿತವಾಗಿಲ್ಲ, ಇದು ವಿಶ್ವಕ್ಕೆ ಅನ್ವಯಿಸುತ್ತದೆ. ಹೀಗಾಗಿ ಯೋಗ ವಿಶ್ವಶಾಂತಿಗೆ ಅಗತ್ಯವಾಗಿದ್ದು ಸಮಸ್ಯೆ ನಿವಾರಕ ಎಂದು ವ್ಯಾಖ್ಯಾನಿಸಿದರು.
ಯೋಗವನ್ನು ಅರಿತುಕೊಳ್ಳುವುದು ಅಷ್ಟೇ ಅಲ್ಲ ಅದನ್ನು ಜೀವನದ ಅವಿಭಾಜ್ಯ ಅಂಗವಾಸಬೇಕು.. ಕೇವಲ ಯೋಗ ದಿನ ಮಾತ್ರವಲ್ಲದೆ ಎಲ್ಲ ದಿನವೂ ಕೂಡ ಯೋಗದ ಮೂಲಕ ಸ್ವಾಸ್ಥ್ಯ, ಸುಖ ಮತ್ತು ಶಾಂತಿಯನ್ನು ಅನುಭವಿಸಬೇಕು ಎಂದು ಸಲಹೆ ನೀಡಿದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement