ಐದನೇ ದಿನವೂ 10 ಗಂಟೆ ಇಡಿ ವಿಚಾರಣೆ ಎದುರಿಸಿದ ರಾಹುಲ್‌ ಗಾಂಧಿ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಸಂಬಂಧ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಸುಮಾರು 10 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆ 11:15ರ ಸುಮಾರಿಗೆ ಇಡಿ ಕಚೇರಿಗೆ ಆಗಮಿಸಿದ ರಾಹುಲ್‌ ಗಾಂಧಿ ಸುಮಾರು 8 ಗಂಟೆ ವಿಚಾರಣೆ ಎದುರಿಸಿ ಅರ್ಧ ಗಂಟೆ ಬಿಡುವು ಪಡೆದರು. ನಂತರ ಬಳಿಕ ಪುನಃ ಹಾಜರಾಗಿ ವಿಚಾರಣೆ ಎದುರಿಸಿದರು.
ಯಂಗ್‌ ಇಂಡಿಯನ್‌ ಪ್ರೈವೇಟ್‌ ಲಿಮಿಟೆಡ್‌ (ವೈಐಎಲ್‌) ಮೇಲೆ ಗಾಂಧಿ ಕುಟುಂಬ ಹೊಂದಿರುವ ಮಾಲೀಕತ್ವದ ಹಕ್ಕು ಹಾಗೂ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾತೃಸಂಸ್ಥೆ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ (ಎಜೆಎಲ್‌)ನಲ್ಲಿನ ಷೇರರುಗಳನ್ನು ವೈಐಎಲ್‌ ಖರೀದಿ ಮಾಡಿದ ಸ್ವರೂಪದ ಕುರಿತು ಕುರಿತು ಇಡಿ ಅಧಿಕಾರಿಗಳ ತಂಡವು ರಾಹುಲ್‌ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು.
ಇದುವರೆಗೂ ರಾಹುಲ್‌ ಗಾಂಧಿ 40 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದಂತಾಗಿದೆ. ಈ ಮಧ್ಯೆ ಇಡಿ ಕೇಂದ್ರದ ಅಣತಿಯಂತೆ ರಾಹುಲ್‌ ಅವರ ವಿಚಾರಣೆ ನಡೆಸಿ ಕಿರುಕುಳ ನೀಡುತ್ತಿದೆ. ಇದು ದ್ವೇಷ ರಾಜಕಾರಣ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement