ಕುಡಿದ ಅಮಲಿನಲ್ಲಿ ಯುವತಿಯರ ಬೀದಿ ರಂಪಾಟ; ಪೊಲೀಸನ ಕಾಲರ್‌ ಹಿಡಿದು ಒದ್ದ ಯುವತಿ | ವೀಕ್ಷಿಸಿ

ಸೋಷಿಯಲ್‌ ಮೀಡಿಯಾದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯರು ನೈಟ್‌ ಡ್ಯೂಟಿಯಲ್ಲಿರುವ ಪೊಲೀಸನಿಗೆ ಕಿಕ್‌ ಕೊಟ್ಟ ವೀಡಿಯೊ ವೈರಲ್‌ ಆಗಿದೆ.
ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಾತ್ರಿ ವೇಳೆ ಪಾಳಿಯಲ್ಲಿದ್ದ ಪೊಲೀಸ್‌ ವಾಹನ ಚಲಾಯಿಸುವವರನ್ನು ತಡೆದು ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ಈ ವೇಳೆ ಯುವತಿಯರಿದ್ದ ಕಾರನ್ನು ಪೊಲೀಸ್‌ ತಡೆದಿದ್ದಾರೆ. ಮದ್ಯಪಾನದ ಬಗ್ಗೆ ಪರೀಕ್ಷೆ ನಡೆಸುವುದಕ್ಕೂ ಮುನ್ನ ಈ ಯುವತಿಯರು ಕುಡಿದ ನಶೆಯಲ್ಲಿ ಗಾಡಿಯಿಂದ ಇಳಿದು ಬೀದಿ ರಂಪಾಟ ಮಾಡಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಪೊಲೀಸ್‌ ಕಾನ್‌ಸ್ಟೇಬಲ್‌ ತಮ್ಮ ಕೆಲಸ ಮಾಡುತ್ತಿದ್ದಂತೆ ನಶೆಯಲ್ಲಿದ್ದ ಯುವತಿ ಮನಸೋ ಪೊಲೀಸನಿಗೆ ಮನಸೋ ಇಚ್ಛೇ ಬೈಯಲು ಶುರು ಮಾಡಿದ್ದಾಳೆ. ಅಷ್ಟೇ ಅಲ್ಲ ಪೊಲೀಸಪ್ಪನ ಕಾಲರ್‌ ಹಿಡಿದು ಬೈದಿದ್ದಾಳೆ. ಸಾಲದೆಂಬಂತೆ ಕಾಲಿನಿಂದ ಒದೆಯುವುದಕ್ಕೂ ಮುಂದಾಗಿದ್ದಾಳೆ. ಅವಾಚ್ಯವಾಗಿ ನಿಂದಿಸಿದ್ದಾಳೆ. ಯುವತಿಯ ಈ ವರ್ತನೆ ಸಂಪೂರ್ಣವಾಗಿ ರೆಕಾರ್ಡ್‌ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಡುರಸ್ತೆಯಲ್ಲಿನ ರಂಪಾಟದ ಬರೋಬ್ಬರಿ ಎಂಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಆಗಿವೆ. ವಿಡಿಯೋ ಮಾಡಲು ಬಂದವರಿಗೆಲ್ಲ ಯುವತಿ ಹೊಡೆಯಲು ಯುವತಿ ಯತ್ನಿಸಿದ್ದಾಳೆ. ಅಷ್ಟೇ ಅಲ್ಲೇ ಪಕ್ಕದಲ್ಲಿದ್ದ ದ್ವಿಚಕ್ರವಾಹವನ್ನೂ ತಳ್ಳಿದ್ದಾಳೆ. ವಿಡಿಯೋ ಮಾಡಿ ಎಂದು ನಡು ರಸ್ತೆಯಲ್ಲಿ ಕಿರುಚಾಡಿದ್ದಾಳೆ.
ಬಾರ್‌ನಲ್ಲಿ ಕುಡಿದಾಗಲೂ ಯುವತಿಯರ ಗುಂಪು ಅಲ್ಲಿಯೂ ಕಿರಿಕ್‌ ಮಾಡಿದೆ ಎಂದು ಹೇಳಲಾಗಿದೆ. ಬಾರ್‌ನಿಂದ ಹೊರಬರುತ್ತಿದ್ದಂತೆ ಅಲ್ಲಿಯೂ ಕೆಲವರ ಜೊತೆ ವಾಗ್ವಾದ ಮಾಡಿದ್ದಾರೆ. ನಂತರ ತಾವೇ ಬಡಿದಾಡಿಕೊಂಡು, ನಡುರಸ್ತೆಯಲ್ಲಿ ಬಿದ್ದು ಹೊರಳಾಡಿದ್ದಾರೆ. ಸದ್ಯ ಈ ವಿಡಿಯೋಗಳೆಲ್ಲವೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಮಾಡಿದ್ದಕ್ಕೆ ಅಂಗಡಿಯವನ ಶಿರಚ್ಛೇದ ಮಾಡಿದ ಇಬ್ಬರ ಬಂಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ