ನಟ ದಿಗಂತಗೆ ಗಂಭೀರ ಪೆಟ್ಟಾಗಿಲ್ಲ, ಯಾವುದೇ ಆತಂಕ ಬೇಡ: ತಂದೆ ಕೃಷ್ಣಮೂರ್ತಿ ಮಾಹಿತಿ

posted in: ರಾಜ್ಯ | 0

ಬೆಂಗಳೂರು: ನಟ ದಿಗಂತ್‌ಗೆ ಯಾವುದೇ ಗಂಭೀರ ಪೆಟ್ಟಾಗಿಲ್ಲ. ಆತನ ಬಳಿಯಲ್ಲಿಯೂ ಮಾತನಾಡಿದ್ದೇನೆ. ವೈದ್ಯರ ಬಳಿಯಲ್ಲಿಯೂ ಚರ್ಚಿಸಿದ್ದೇನೆ. ಯಾವುದೇ ಆತಂಕ ಬೇಡ ಎಂಬುದಾಗಿ ನಟ ದಿಗಂತ್ ಅವರ ತಂದೆ ಕೃಷ್ಣಮೂರ್ತಿ ಹೇಳಿದ್ದಾರೆ.
ಇಂದು, ಮಂಗಳವಾರ ಮಣಿಪಾಲ್ ಆಸ್ಪತ್ರೆಯ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಷ್ಟೇ ದಿಗಂತ್ ಜೊತೆಗೆ ಮಾತನಾಡಿ ಬಂದಿದ್ದೇನೆ. ಗಂಭೀರ ಪೆಟ್ಟಾಗಿಲ್ಲ ಎಂದು ಹೇಳಿದ್ದಾರೆ. ಆರೋಗ್ಯ ಸ್ಥಿರವಾಗಿದೆ. ಆಪರೇಷನ್ ಗೆ ವೈದ್ಯರು ಕರೆದೊಯ್ದಿದ್ದಾರೆ ಎಂದು ತಿಳಿಸಿದರು.ನಟ ದಿಗಂತ್ ಆರೋಗ್ಯದ ಬಗ್ಗೆಯೂ ವೈದ್ಯರ ಬಳಿಯಲ್ಲಿ ಚರ್ಚಿಸಿದ್ದೇನೆ. ಯಾವುದೇ ಆತಂಕ ಬೇಡ ಎಂಬುದಾಗಿ ವೈದ್ಯರು ಹೇಳಿದ್ದಾರೆ. ಈಗ ಗಂಭೀರ ಪೆಟ್ಟಾಗಿಲ್ಲ, ಆದರೆ ಮುಂದೆ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದಾಗಿ ವೈದ್ಯರು ಆಪರೇಷನ್ ಮೂಲಕ ಸರಿ ಪಡಿಸುತ್ತಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದರು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ನಟ ದಿಂಗತ್ ಸ್ಥಿತಿ ಗಂಭೀರವಾಗಿಲ್ಲ. ಅವರು ಆರಾಮಾಗಿದ್ದಾರೆ ದಿಗಂತ್ ತಂದೆ ಹಾಗೂ ಅವರ ತಂದೆಯ ಜೊತೆ ದಿಗಂತನನ್ನು ಮಾತನಾಡಿಸಿಕೊಂಡು ಬಂದಿದ್ದೇನೆ. ಲವಲವಿಕೆಯಿಂದ ಇದ್ದಾರೆ ಎಂದು ಕತ್ತಿನ ಭಾಗಕ್ಕೆ ಪೆಟ್ಟಾಗಿರುವ ಕಾರಣ ಶಸ್ತ್ರ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ.
ಗೋವಾದ ಸಮುದ್ರದ ದಡದಲ್ಲಿ ಸ್ಟಂಟ್ ಮಾಡುತ್ತಿದ್ದಾಗ ಕತ್ತಿನ ಭಾಗಕ್ಕೆ ಪೆಟ್ಟಾಗಿದೆ, ಆದರೆ ಗಂಭೀರವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದರು. ಅವರ ಕತ್ತಿನ ಭಾಗಕ್ಕೆ ಆಗಿರುವ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ನಡೆಸಲಿದ್ದಾರೆ. ಆ ಬಳಿಕ ಆರಾಮವಾಗಲಿದ್ದಾರೆ. ಯಾರೂ ಹೆದರುವಂತಹದ್ದಿಲ್ಲ ಎಂದರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   13 ವರ್ಷದ ಮಂಗಳೂರಿನ ಬಾಲಕನ ‘ಕೋಮು ದಾಳಿ’ ಎಂಬ ಕಟ್ಟು ಕಥೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ