ಬಿಜೆಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡರೆ ಬಿರುಕು ಉಂಟಾಗುವುದಿಲ್ಲ: ಉದ್ಧವ್ ಠಾಕ್ರೆಗೆ ಹೇಳಿದ ಏಕನಾಥ್ ಶಿಂಧೆ

ಮುಂಬೈ: ಶಿವಸೇನೆ ನಾಯಕ ಮಿಲಿಂದ್ ನಾರ್ವೇಕರ್ ಅವರು ಮಂಗಳವಾರ ಗುಜರಾತ್‌ನ ಸೂರತ್‌ನಲ್ಲಿ ಬೀಡುಬಿಟ್ಟಿರುವ ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಾಸಕರನ್ನು ಭೇಟಿಯಾದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ, ಮಿಲಿಂದ್ ನಾರ್ವೇಕರ್ ಅವರು ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಂತೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಏಕನಾಥ್ ಶಿಂಧೆ ಅವರು ತಮ್ಮೊಂದಿಗೆ 35 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದು, ಉದ್ಧವ್ ಠಾಕ್ರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದರೆ, ಶಿವಸೇನೆ ಪಕ್ಷದಲ್ಲಿ ಬಿರುಕು ಉಂಟಾಗುವುದಿಲ್ಲ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳು ಹೇಳುವಂತೆ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ಅವರಿಗೆ ತಾನು ಮುಖ್ಯಮಂತ್ರಿಯ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ ಮತ್ತು ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು (ಏಕನಾಥ್ ಶಿಂಧೆ ಅವರನ್ನು ಇಂದು ಸೇನಾ ಸಿಎಲ್‌ಪಿ ನಾಯಕ ಸ್ಥಾನದಿಂದ ತೆಗೆದುಹಾಕಲಾಗಿದೆ).
ಬಿಜೆಪಿಯು ಶಿವಸೇನಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಏಕನಾಥ್ ಶಿಂಧೆ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯೊಂದಿಗೆ ಸಂಭವನೀಯ ಮೈತ್ರಿಯ ವಿರುದ್ಧ ಮಾತನಾಡಿದ ಉದ್ಧವ್ ಠಾಕ್ರೆ, ಕೇಸರಿ ಪಕ್ಷವು ಈ ಹಿಂದೆ ಶಿವಸೇನೆಯನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಏಕನಾಥ್ ಶಿಂಧೆ ಅವರಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಏಕನಾಥ್ ಶಿಂಧೆ, ಈ ನಿರ್ಧಾರ ನಿಮ್ಮದು ಎಂದು ತಿಳಿಸಿದ್ದು, ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಶಿವಸೇನೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸೂರತ್‌ನಲ್ಲಿರುವ ಶಾಸಕರಿಗೆ ಸಮಸ್ಯೆ ಇದೆ ಎಂದು ಹೇಳಿದರು ಎಂದು ಮೂಲಗಳು ಹೇಳಿವೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement