ಆರೋಗ್ಯದಲ್ಲಿ ಚೇತರಿಕೆ: ನಟ ದಿಗಂತ್ ಆಸ್ಪತ್ರೆಯಿಂದ ಮನೆಗೆ

posted in: ರಾಜ್ಯ | 0

ಬೆಂಗಳೂರು: ಗೋವಾ ಟ್ರಿಪ್‌ ಸಮಯದಲ್ಲಿ ಸೊಮರ್ ಸಾಲ್ಟ್‌ ಮಾಡುವಾಗ ಬಿದ್ದು ಕುತ್ತಿಗೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಖ್ಯಾತ ನಟ ದಿಗಂತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಮಂಗಳವಾರ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಈಗ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗಿದೆ.
ಕುಟುಂಬದ ಜೊತೆ ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್ ಮಾಡಿ ಗಾಯಗೊಂಡ ಪರಿಣಾಮ ಬೆಂಗಳೂರಿನ ಮಣಿಪಾಲ್ ಆಸ್ವತ್ರೆಗೆ ದಾಖಲಿಸಿ, ನಿನ್ನೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಗೋವಾದ ಕಡಲ ತೀರದಲ್ಲಿ ಸೊಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ಸ್ಪೈಲನ್‌ ಕಾರ್ಡ್‌ಗೆ ಗಾಯ ಮಾಡಿಕೊಂಡಿದ್ರು. ಬಳಿಕ ಏರ್‌ಲಿಫ್ಟ್ ಮಾಡಿ ದಿಗಂತ್‌ ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಡಾ.ವಿಧ್ಯಾಧರ ನೇತೃತ್ವದ ತಂಡ ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಆರೋಗ್ಯ ಸ್ಥಿರವಾದ ಕಾರಣ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಮಾಡಲಾಗಿದೆ ಹಾಗೂ ಮನೆಯಲ್ಲಿಯೇ ಕೆಲಕಾಲ ಬೆಡ್ ರೆಸ್ಟ್‌ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಫೇಸ್‌ಬುಕ್‌ನಲ್ಲಿ ಕಿರುಕುಳ: ಮೈಸೂರು ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಿದ ನಟಿ ಪವಿತ್ರಾ ಲೋಕೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ