ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ನೂಕಿ ಸಾಯಿಸಿದ ತಂದೆ, ಪತ್ನಿಯನ್ನೂ ನೂಕಿ ಹತ್ಯೆಗೆ ಯತ್ನ

posted in: ರಾಜ್ಯ | 0

ಮಂಗಳೂರು: ತಂದೆಯೊಬ್ಬ ಶಾಲೆ ಮುಗಿಸಿ ಮನೆಗೆ ಬಂದ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ ನಂತರ ಹಾಗೂ ಪತ್ನಿಯೊಂದಿಗೆ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತ ಮಕ್ಕಳನ್ನು ರಶ್ಮಿತಾ (13), ಉದಯ (11), ದಕ್ಷಿತ್ (4) ಎಂದು ಹೇಳಲಾಗಿದೆ. ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಈ ದುಷ್ಕೃತ್ಯವೆಸಗಿದ್ದಾನೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಗುರುವಾರ ಬೆಳಿಗ್ಗೆ ಎಂದಿನಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗಿದ್ದ ಪತ್ನಿ ಸಂಜೆ ಮನೆಗೆ ವಾಪಸಾದ ನಂತರ ಮಕ್ಕಳು ಮನೆಯಲ್ಲಿ ಕಂಡಿಲ್ಲದ ಕಾರಣ ಎಲ್ಲೆಡೆ ಹುಡುಕಾಡಿದ್ದಾರೆ. ನಂತರ ಮನೆಯ ಸಮೀಪದ ಮನೆಯ ಬಾವಿ ಕಡೆ ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳು ನೀರಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಬಾವಿಯ ಪಕ್ಕ ನಿಂತು ಸಹಾಯಕ್ಕೆಂದು ಕೂಗುತ್ತಿದ್ದಾಗ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಹಿತೇಶ್, ಪತ್ನಿಯನ್ನೂ ಬಾವಿಗೆ ದೂಡಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿ ಹಿತೇಶ್ ಮತ್ತು ಲಕ್ಷ್ಮೀ ಅವರನ್ನು ರಕ್ಷಿಸಿದ್ದಾರೆ.
ಕೂಡಲೇ ಮೂಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕದಳ ಸಹಾಯದಿಂದ ಮೂಲ್ಕಿ ಪೋಲೀಸರು ಮೂವರು ಮಕ್ಕಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮಕ್ಕಳು ಮೃತಪಟ್ಟರು ಎಂದು ತಿಳಿದುಬಂದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಸಿಹಿಸುದ್ದಿ : ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ