ಮಹಾ ಸರ್ಕಾರದ ಬಿಕ್ಕಟ್ಟು: ಅಖಾಡಕ್ಕಿಳಿದ ಸಿಎಂ ಉದ್ಧವ್ ಠಾಕ್ರೆ ಪತ್ನಿ…!

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿಯುತ್ತಿದ್ದಂತೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಅವರು ಈಗ ಅಖಾಡಕ್ಕೆ ಇಳಿದಿದ್ದಾರೆ.
ಅವರು ಇತರ ಶಾಸಕರ ಪತ್ನಿಯರನ್ನು ಸಂಪರ್ಕಿಸಿ ಅವರ ಪತಿಯೊಂದಿಗೆ ಮಾತನಾಡಲು ಮನವೊಲಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಪ್ರಸ್ತುತ ಗುವಾಹತಿಯ ಹೋಟೆಲ್‌ನಲ್ಲಿ ತಂಗಿರುವ ಕೆಲವು ಬಂಡಾಯ ಶಾಸಕರಿಗೆ ಉದ್ಧವ್ ಠಾಕ್ರೆ ಸಂದೇಶ ಕಳುಹಿಸುತ್ತಿದ್ದಾರೆ.

advertisement

ಶನಿವಾರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಶಿವಸೇನೆ ಮತ್ತು ಅದರ ಸಂಸ್ಥಾಪಕ ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಯಾವುದೇ ರಾಜಕೀಯ ಸಂಘಟನೆ ಅಥವಾ ಬಣ ಬಳಸದಂತೆ ನಿರ್ಬಂಧಿಸಲು ನಿರ್ಣಯಗಳನ್ನು ಅಂಗೀಕರಿಸಿದರು ಮತ್ತು ಚುನಾವಣಾ ಆಯೋಗಕ್ಕೆ (EC) ಮನವಿ ಮಾಡಿದರು.
ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಗುಂಪು ಸದ್ಯ ಗುವಾಹತಿಯ ಹೊಟೇಲ್‌ನಲ್ಲಿ ಬೀಡು ಬಿಟ್ಟಿದೆ.
ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಬಲ 287 ಮತ್ತು ವಿಶ್ವಾಸ ಮತದ ಸಂದರ್ಭದಲ್ಲಿ ಬಹುಮತಕ್ಕೆ 144 ಬೇಕು. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಆಡಳಿತಾರೂಢ ಒಕ್ಕೂಟವು 169 ಸ್ಥಾನಗಳನ್ನು ಹೊಂದಿದೆ. ಶಿಂಧೆ ನೇತೃತ್ವದ ಶಾಸಕರು ರಾಜೀನಾಮೆ ನೀಡಿದರೆ, ಮಹಾ ವಿಕಾಸ್ ಅಘಾಡಿ ಅವರ (ಎಂವಿಎ) ಬಲವು ಬಹುಮತಕ್ಕಿಂತ ಕೆಳಗಿಳಿಯುತ್ತದೆ, ಇದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   8 ತಿಂಗಳ ಮಗು ಇದ್ದಕ್ಕಿದ್ದಂತೆ ಹಾಲು ಕುಡಿಯುವುದು ನಿಲ್ಲಿಸಿತು; ಮಗುವಿನ ವೈದ್ಯಕೀಯ ವರದಿ ನೋಡಿ ಪೋಷಕರು ಬೆಚ್ಚಿಬಿದ್ದರು...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement