ಕಥೆ ಹೆಣೆದ’ ಆರೋಪದ ಮೇಲೆ ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಬಂಧನ, ನನ್ನ ಪ್ರಕರಣದಲ್ಲೂ ಹೀಗೆಯೇ ಮಾಡಿದ್ದಾರೆ: ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್

ನವದೆಹಲಿ: ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ಅವರನ್ನು ಶನಿವಾರ ಗುಜರಾತ್‌ ಪೊಲೀಸರು ಬಂಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಇಸ್ರೊದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರು, ನಿವೃತ್ತ ಪೊಲೀಸ್‌ ಅಧಿಕಾರಿಯು ‘ಕಥೆಗಳನ್ನು ಸೃಷ್ಟಿಸಿ ಸಂಚಲನ ಮೂಡಿಸಲು ಯತ್ನಿಸಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ. 1994 ರ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಅವರು ನನ್ನ ವಿಷಯದಲ್ಲಿಯೂ ಹೀಗೆ ಮಾಡಿದ್ದರು ಎಂದು ಹೇಳಿದ್ದಾರೆ.
2002ರ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಗುಜರಾತ್ ನ್ಯಾಯಾಲಯ ನೀಡಿದ್ದ ಕ್ಲೀನ್ ಚಿಟ್ ಅನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಜೂನ್ 24ರಂದು ನೀಡಿದ ತೀರ್ಪಿನ ಒಂದು ದಿನದ ನಂತರ, ಗುಜರಾತ್ ಮಾಜಿ ಡಿಜಿಪಿ ಆರ್. ಬಿ. ಶ್ರೀಕುಮಾರ್ ಅವರನ್ನು ಶನಿವಾರ ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಫೋನ್ ಮೂಲಕ ಮಾತನಾಡಿದ ನಾರಾಯಣನ್, ಮಾಜಿ ಅಧಿಕಾರಿ ಶ್ರೀಕುಮಾರ್ “ಸಭ್ಯತೆಯ ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ” ಮತ್ತು “ಎಲ್ಲದಕ್ಕೂ ಮಿತಿ ಇದೆ” ಎಂದು ಹೇಳಿದರು.

ಕಥೆಗಳನ್ನು ಹೆಣೆದು ಅವುಗಳನ್ನು ಸಂಚಲನ ಮೂಡಿಸಲು ಪ್ರಯತ್ನಿಸಿದ್ದಕ್ಕಾಗಿ ಇಂದು ಅವರನ್ನು ಬಂಧಿಸಲಾಗಿದೆ ಎಂದು ನನಗೆ ಗೊತ್ತಾಯಿತು, ಅವರ ವಿರುದ್ಧ ಆರೋಪವಿದೆ. ನನ್ನ ವಿಷಯದಲ್ಲೂ ಅವರು ಮಾಡಿದ್ದು ಅದನ್ನೇ. ದೊಡ್ಡ ಹುದ್ದೆಯಲ್ಲಿರುವ ಕೆಲವು ಜವಾಬ್ದಾರಿಯುತ ವ್ಯಕ್ತಿಗಳೂ ಇದನ್ನೇ ಮಾಡುತ್ತಲೇ ಇರುತ್ತಾರೆ” ಎಂದು ನಾರಾಯಣನ್ ಹೇಳಿದರು.
ಇನ್ನು ಮುಂದೆ ನೀವು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಈಗ ಸುಪ್ರೀಂ ಕೋರ್ಟ್ ತೋರಿಸಿದೆ. ಎಲ್ಲದಕ್ಕೂ ಮಿತಿ ಇರುವುದರಿಂದ ಅವರನ್ನು ಬಂಧಿಸಲಾಗುತ್ತಿದೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಅವರು ಸಭ್ಯತೆಯ ವಿಷಯದಲ್ಲಿ, ನ್ಯಾಯಾಂಗ ವಿವೇಕದ ವಿಷಯದಲ್ಲಿ ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ ಎಂದು ಅವರು ಹೇಳಿದರು.
ಕಾನೂನಿನ ಲೋಪಗಳ ಲಾಭ ಪಡೆಯಲು ಯಾರಿಗೂ ಅವಕಾಶ ನೀಡಬಾರದು ಎಂದು ನಾರಾಯಣನ್ ಹೇಳಿದರು. “ಅವರನ್ನು ಬಂಧಿಸಿದಾಗ ನನಗೆ ತುಂಬಾ ಸಂತೋಷವಾಯಿತು ಏಕೆಂದರೆ ಅವರು ಯಾವಾಗಲೂ ಈ ರೀತಿಯ ಕಿಡಿಗೇಡಿತನವನ್ನು ಮಾಡುತ್ತಾರೆ, ಅಂತಹದಕ್ಕೆ ಒಂದು ಅಂತ್ಯ ಇರಬೇಕು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

1994ರ ಇಸ್ರೋ ಬೇಹುಗಾರಿಕೆ ವಿಚಾರದಲ್ಲಿ ನಂಬಿ ನಾರಾಯಣನ್ ಅವರನ್ನು ಆರೋಪದಲ್ಲಿ ಸಿಲುಕಿಸಿದ ಪ್ರಕರಣದಲ್ಲಿ ಶ್ರೀಕುಮಾರ್ ಸೇರಿದಂತೆ ನಾಲ್ವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಆಗಸ್ಟ್ 2021 ರ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕುಮಾರ್ ಹಾಗೂ ಕೇರಳದ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಹಾಗೂ ನಿವೃತ್ತ ಗುಪ್ತಚರ ಅಧಿಕಾರಿಯೊಬ್ಬರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ನಂಬಿ ನಾರಾಯಣನ್ ಮತ್ತು ಇನ್ನೊಬ್ಬ ಮಾಜಿ ಇಸ್ರೋ ವಿಜ್ಞಾನಿ ಕಳೆದ ವರ್ಷ ಆಗಸ್ಟ್‌ನಲ್ಲಿ ಇಸ್ರೋ ಪಿತೂರಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡಕ್ಕೆ ಕೇರಳದ ಮಾಜಿ ಪೊಲೀಸರು ಮತ್ತು ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳಿಂದ “ಮಾನಸಿಕ ಮತ್ತು ದೈಹಿಕ ಹಿಂಸೆ” ನೀಡಲಾಯಿತು ಎಂದು ಹೇಳಿದ್ದರು. ಶ್ರೀಕುಮಾರ್ ಆಗ ಗುಪ್ತಚರ ದಳದ ಉಪ ನಿರ್ದೇಶಕರಾಗಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement