ಮಹಾರಾಷ್ಟ್ರ ಬಿಕ್ಕಟ್ಟು: ಬೆದರಿಕೆ ನಡುವೆ 15 ಬಂಡಾಯ ಸೇನಾ ಶಾಸಕರಿಗೆ Y+ ಭದ್ರತೆ ನೀಡಿದ ಕೇಂದ್ರ

ಮುಂಬೈ: ಶಿವಸೇನೆ ಕಾರ್ಯಕರ್ತರು ಶಿಂಧೆ ಪಾಳಯದಲ್ಲಿರುವ ಸೇನಾ ಶಾಸಕರ ಕಚೇರಿಗಳು ಮತ್ತು ಆಸ್ತಿಗಳನ್ನು ಧ್ವಂಸಗೊಳಿಸಿರುವ ವರದಿಗಳ ನಡುವೆ ಕೇಂದ್ರವು ಭಾನುವಾರ 15 ಬಂಡಾಯ ಶಿವಸೇನೆ ಶಾಸಕರಿಗೆ ‘ವೈ ಪ್ಲಸ್’ ಭದ್ರತೆ ನೀಡಿದೆ. ಆದರೆ, ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಭದ್ರತಾ ಕವಚ ಪಟ್ಟಿಯಲ್ಲಿ ಸೇರಿಸಿಲ್ಲ.
‘ವೈ’ ವರ್ಗದ ಭದ್ರತೆಯು ಎಂಟು ಸಿಬ್ಬಂದಿಯನ್ನು ಒಳಗೊಂಡಿರುತ್ತದೆ, ಇದರಲ್ಲಿ ಒಬ್ಬರು ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿರಬಹುದು.ಗುವಾಹತಿಯಲ್ಲಿ ಏಕನಾಥ್ ಶಿಂಧೆ ಮತ್ತು ಇತರ ಬಂಡಾಯ ಶಿವಸೇನೆ ಶಾಸಕರನ್ನು ಸೇರಿಕೊಂಡ ನಂತರ ದಾದರ್ ಶಾಸಕ ಸದಾ ಸರ್ವಾಂಕರ್ ಅವರ ನಿವಾಸಕ್ಕೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅನ್ನು ನಿಯೋಜಿಸಲಾಗಿದೆ.

ಉದ್ಧವ್ ಠಾಕ್ರೆ ಬೆಂಬಲಿಗರು ಪಕ್ಷ ತೊರೆದವರನ್ನು “ದ್ರೋಹಿಗಳು” ಎಂದು ಹೇಳಿದ್ದಾರೆ. “ಅವರು ಶಿವಸೈನಿಕರಲ್ಲ. ಅವರಿಗೆ ಶಿವಪ್ರಸಾದ್ ನೀಡುತ್ತೇವೆ’ ಎಂದು ಸೇನಾ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಏತನ್ಮಧ್ಯೆ, ಥಾಣೆ, ಡೊಂಬಿವಿಲಿ, ಕಲ್ಯಾಣ್ ಮತ್ತು ಉಲ್ಲಾಸ್‌ನಗರದಲ್ಲಿರುವ ಶಿಂಧೆ ಶಿಬಿರದ ಎಲ್ಲಾ ಕಚೇರಿಗಳಿಗೆ ಪೊಲೀಸ್ ಭದ್ರತೆಯನ್ನು ನೀಡಲಾಯಿತು.ಈ ವಾರದ ಆರಂಭದಲ್ಲಿ ಉದ್ಧವ್ ಠಾಕ್ರೆ ಅವರು ಕರೆದಿದ್ದ ಪಕ್ಷದ ಸಭೆಗೆ ಹಾಜರಾಗದ ಸಚಿವ ಏಕನಾಥ್ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರಿಗೆ ಶನಿವಾರ ಅನರ್ಹತೆ ಬಗ್ಗೆ ನೋಟಿಸ್ ನೀಡಲಾಗಿದೆ.
ಆದರೆ, ಭಾನುವಾರ ಶಿಂಧೆ ನೇತೃತ್ವದ ಬಂಡಾಯ ಶಿಬಿರವು ಸಮನ್ಸ್‌ಗೆ ಉತ್ತರಿಸಲು ಏಳು ದಿನಗಳ ಕಾಲಾವಕಾಶ ಕೋರಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Y+ ಭದ್ರತೆ ಒದಗಿಸುವ ಶಿವಸೇನಾ ಬಂಡಾಯ ಶಾಸಕರು:
ರಮೇಶ ಬೋರ್ನಾರೆ, ಮಂಗೇಶ್ ಕುಡಾಲ್ಕರ್, ಸಂಜಯ್ ಶಿರ್ಸಾತ್, ಲತಾಬಾಯಿ ಸೋನವಾನೆ, ಪ್ರಕಾಶ್ ಸರ್ವೆ, ಸದಾನಂದ್ ಸರಣಾವಂಕರ್,
ಯೋಗೇಶ್ ದಾದಾ ಕದಂ, ಪ್ರತಾಪ್ ಸರ್ನಾಯಕ್, ಯಾಮಿನಿ ಜಾಧವ್, ಪ್ರದೀಪ್ ಜೈಸ್ವಾಲ್, ಸಂಜಯ್ ರಾಥೋಡ್, ದಾದಾಜಿ ಭೂಸೆ, ದಿಲೀಪ್ ಲಾಂಡೆ, ಬಾಲಾಜಿ ಕಲ್ಯಾಣರ್, ಸಂದೀಪನ ಭೂಮಾರೆ ಅವರಿಗೆ Y+ ಭದ್ರತೆ ನೀಡಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement