ಧಾರವಾಡ: ಮಾರ್ವೇಲ್ ಕಂಪನಿ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ಹೈದ್ರಾಬಾದ ಮೂಲದ ಮಾರ್ವೆಲ್ ಕಂಪನಿಯವರು ಜುಲೈ 4ರಂದು ಬೆಳಿಗ್ಗೆ 9:30ಕ್ಕೆ ಯಾವುದೇ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರೋಸೆಸ್ ಅಸೋಸಿಯೇಟ್ಸ್‌ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ.
ಆಸಕ್ತರು ತಮ್ಮ ಸ್ವ-ವಿವರ, ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 0836-2462202 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ನಿಮ್ಮ ಕಾಮೆಂಟ್ ಬರೆಯಿರಿ

advertisement