ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭಾಶಯಗಳು

ಹಲ್ಲುಜ್ಜದೆ ಮಗುವಿಗೆ ಮುತ್ತು ಕೊಡಬೇಡಿ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ…!

ಮನ್ನಾರ್​ಕಾಡ್ (ಕೇರಳ) : ಹಲ್ಲುಜ್ಜದೆ ಮಗುವಿಗೆ ಮುತ್ತು ಕೊಡುವುದನ್ನು ವಿರೋಧಿಸಿದ ಪತ್ನಿಯನ್ನು ಪತಿಯೇ ಕೊಲೆ ಮಾಡಿದ ಆತಂಕಕಾರಿ ಘಟನೆ ಕೇರಳದ ಮನ್ನಾರ್‌ಕಾಡ್‌ನಲ್ಲಿ ಮಂಗಳವಾರ ನಡೆದ ಬಗ್ಗೆ ವರದಿಯಾಗಿದೆ.
ಕೊಲೆಯಾದ ಮಹಿಳೆಯನ್ನು ದೀಪಿಕಾ (28) ಎಂದು ಗುರುತಿಸಲಾಗಿದೆ. ಕೊಲೆ ಕೃತ್ಯ ಎಸಗಿದ ಆಕೆಯ ಪತಿ ಅವಿನಾಶ್‌ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲುಜ್ಜದೆ ಮಗುವಿಗೆ ಮುತ್ತು ನೀಡಲು ಬಂದ ಪತಿಗೆ ಹಲ್ಲುಜ್ಜದೆ ಮುತ್ತು ನೀಡಬೇಡಿ ಎಂದಿದ್ದಾಳೆ. ಇದರಿಂದ ದೀಪಿಕಾಳೊಂದಿಗೆ ಅವಿನಾಶ್ ವಾಗ್ವಾದಕ್ಕಿಳಿದಿದ್ದಾನೆ. ಜಗಳ ತಾರಕಕ್ಕೇರಿ ಪತ್ನಿ ದೀಪಿಕಾಳನ್ನು ಅವಿನಾಶ್ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

advertisement

ದೀಪಿಕಾಳೊಂದಿಗೆ ಜಗಳ ಕಾದು ಅವಿನಾಶ್ ಮಚ್ಚು ಹಿಡಿದು ಆಕೆಯ ಪಕ್ಕ ನಿಂತಿದ್ದನ್ನು ಸ್ಥಳೀಯರು ನೋಡಿದ್ದರು. ಬಳಿಕ ಪುತ್ರ ಐವಿನ್ ಎದುರೇ ಆರೋಪಿ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ನೋಡಿ ಮಗು ಅಳುತ್ತಿರುವ ದೃಶ್ಯ ಮನಕಲಕುವಂತಿತ್ತು.
ಸ್ಥಳೀಯರು ಕೂಡಲೇ ದೀಪಿಕಾಳ ಆಸ್ಪತ್ರೆಗೆ ಸಾಗಿಸಿದದರೂ ಅಷ್ಟರಲ್ಲೇ ಅವಳು ಮೃತಪಟ್ಟಿದ್ದಳು. ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಪತಿ ಅವಿನಾಶ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   25 ವರ್ಷಗಳೊಳಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು : 2047ರ ಗುರಿ ನಿಗದಿಪಡಿಸಿದ ಪ್ರಧಾನಿ ಮೋದಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement