ಭೀಕರವಾಗಿ ಹತ್ಯೆಗೀಡಾದ ಕನ್ಹಯ್ಯಾ ಲಾಲ್ ದೇಹಕ್ಕೆ 26 ಬಾರಿ, ಕುತ್ತಿಗೆಗೆ 7-8 ಬಾರಿ ಇರಿಯಲಾಗಿತ್ತು….!

ಉದಯಪುರ: ರಾಜಸ್ಥಾನದ ಉದಯ್‌ಪುರ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ಮೂಲಭೂತವಾದಿಗಳಿಂದ ಹತ್ಯೆಗೀಡಾದ ಮೃತ ಕನ್ಹಯ್ಯಾ ಲಾಲ್‌ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ದೇಹದ ಮೇಲೆ ಕುತ್ತಿಗೆಯಿಂದ ಭುಜದವರೆಗೆ 26 ಬಾರಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹರಿತವಾದ ಆಯುಧಗಳಿಂದ ಹಲ್ಲೆಗೊಳಗಾದ ಕನ್ಹಯ್ಯಾ ಲಾಲ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ.
ವರದಿಗಳ ಪ್ರಕಾರ, ಮೃತರ ಕುತ್ತಿಗೆಯ ಮೇಲೆ ನಿರ್ದಿಷ್ಟವಾಗಿ 7 ರಿಂದ 8 ಬಾರಿ ಹರಿತವಾದ ಆಯುಧದಿಂದ ಇರಿದಿದ್ದು, ಅವರ ಸಂಪೂರ್ಣ ದೇಹದ ಮೇಲೆ 26ಕ್ಕೂ ಹೆಚ್ಚು ಗಾಯದ ಗುರುತುಗಳಿವೆ. ಹತ್ಯೆ ಮಾಡಿದವರನ್ನು ಮೊಹಮ್ಮದ್ ರಿಯಾಜ್ ಅಖ್ತರ್ ಮತ್ತು ಗೋಸ್ ಮೊಹಮ್ಮದ್ ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಈ ಇಬ್ಬರು ಕನ್ಹಯ್ಯಾ ಲಾಲ್ ಅವರನ್ನು ಕೊಂದಿದ್ದಾರೆ.

ದಾಳಿಯ ವೇಳೆ ಕನ್ಹಯ್ಯಾ ಅವರ ಕೈಯನ್ನೂ ಕತ್ತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಹರಿತವಾದ ಆಯುಧಗಳ ಪುನರಾವರ್ತಿತ ದಾಳಿಯಿಂದಾಗಿ, ಅವರ ದೇಹದಲ್ಲಿನ ಬಹು ರಕ್ತನಾಳಗಳು ತುಂಡಾಗಿ, ಅಧಿಕ ರಕ್ತಸ್ರಾವ ಮತ್ತು ಸಾವಿಗೆ ಕಾರಣವಾಯಿತು. ರಕ್ತದ ಮಡುವಿನಲ್ಲಿ ಬಿದ್ದಿರುವ ಕನ್ಹಯ್ಯಾ ಕುಮಾರ್ ಶವದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನೂಪೂರ್‌ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಮೃತ ಕನ್ಯಯ್ಯಲಾಲ ಅವರಿಗೆ ಈ ಹಿಂದೆ ಬೆದರಿಕೆ ಹಾಕಲಾಗಿತ್ತು ಎಂದು ವರದಿಗಳು ಉಲ್ಲೇಖಿಸಿವೆ. ಕನ್ಹಯ್ಯಾ ಲಾಲ್ ಅವರ ಮೊಬೈಲ್‌ನಿಂದ ಅವರ 8 ವರ್ಷದ ಮಗ ಆಕಸ್ಮಿಕವಾಗಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು ಎಂದು ಹೇಳಲಾಗಿದೆ.
ಈ ಹಿಂದೆಯೂ ಕನ್ಹಯ್ಯಾ ಲಾಲ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಪೊಲೀಸರು ಅವರನ್ನು ಬಂಧಿಸಿದ್ದರು ಎಂದು ವರದಿಯಾಗಿದೆ. ಕನ್ಹಯ್ಯಾ ಲಾಲ್‌ನನ್ನು ಬಂಧಿಸಿದ ನಂತರವೂ ಹಂತಕರು ಅವರನ್ನು ಬೆದರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಸಂತ್ರಸ್ತೆ ಧನ್ಮಂಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಅವರ ಕುಟುಂಬಸ್ಥರು ಆರೊಪಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

 

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement