ಉತ್ತರ ಕನ್ನಡದ ಶಿರಾಲಿಯಲ್ಲಿ ದಾಖಲೆ ಮಳೆ

ಕಾರವಾರ: ಉತ್ತರ ಕನ್ನಡದ ಕರಾವಳಿಯಲ್ಲಿ ಜೋರಾಗಿ ಮಳೆಯಾಗುತ್ತಿದೆ. ಇದು ಮುಂದುವರಿಯುವ ಲಕ್ಷಣಗಳಿವೆ.
ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರೆ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಹೆಚ್ಚಿನ ಭಾಗದಲ್ಲಿ ಜಿಟಜಿಟಿ ಮಳೆಯಾಗುತ್ತಿದೆ.ಭಟ್ಕಳದ ಶಿರಾಲಿಯಲ್ಲಿ ಒಂದೇ ದಿನದಲ್ಲಿ 200 ಮಿಮೀ ಮಳೆಯಾಗಿದೆ. ಶಿರಾಲಿ ಜನತಾ ವಿದ್ಯಾಲಯದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿದೆ.

ಅಂಕೋಲಾ 120 ಮಿಮೀ, ಹೊನ್ನಾವರ ಹಾಗೂ ಮಂಕಿಯಲ್ಲಿ ತಲಾ 110 ಮಿಮೀ, ಕಾರವಾರದಲ್ಲಿ 9.1 ಸೆಂಟಿಮೀಟರ್ ಮಳೆಯಾಗಿದೆ. ಶಿರಸಿ, ಯಲ್ಲಾಪುರ, ಜೊಯಿಡಾ, ಸಿದ್ದಾಪುರ ಭಾಗದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮುಂಡಗೋಡ ಮತ್ತು ಹಳಿಯಾಳದಲ್ಲೂ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಜು 1ರಿಂದ ಜು.4ರ ವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement