ದೇವೇಂದ್ರ ಫಡ್ನವಿಸ್ ಬದಲು ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ ಶಿಂಧೆ ಆಯ್ಕೆಯ ಹಿಂದಿರುವ ಕಾರಣಗಳು..

ಮುಂಬೈ: ಗುರುವಾರ ಸಂಜೆ 7 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಸ್ವಾಗತಿಸಲು ಮಹಾರಾಷ್ಟ್ರ ಬಿಜೆಪಿ ಸಿದ್ಧತೆ ನಡೆಸುತ್ತಿರುವಾಗ, ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆಂಬ ಸುದ್ದಿ ಅನೇಕರಲ್ಲಿ ಅಚ್ಚರಿಗೆ ಕಾರಣವಾಯಿತು.
ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಅವರು ರಾಜಭವನದಲ್ಲಿ ರಾಜ್ಯಪಾಲ ಬಿಎಸ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನಂತರ ಮುಂಬೈನ ರಾಜಭವನದಲ್ಲಿ ಗುರುವಾರ ಸಂಜೆ 7:30ಕ್ಕೆ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಏಕನಾಥ ಶಿಂಧೆ ಸಿಎಂ ಆಯ್ಕೆ ಹಿಂದಿನ ಐದು ಸಂಭವನೀಯ ಕಾರಣಗಳು….

* 2019ರಲ್ಲಿ, ಬಿಜೆಪಿ ಮತ್ತು ಶಿವಸೇನೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯಲ್ಲಿ ಹೋರಾಡಿ ಗೆದ್ದವು. ಆದಾಗ್ಯೂ, ಫಲಿತಾಂಶದ ನಂತರ, ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡುವುದು ಎಂಬ ಕಾರಣಕ್ಕೆ ಮೈತ್ರಿಯೇ ಮುರಿದುಹೋಯಿತು. ಇದಾದ ಬೆನ್ನಲ್ಲೇ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಎನ್‌ಸಿಪಿಯ ಅಜಿತ್ ಪವಾರ್ ಅವರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎಲ್ಲರನ್ನೂ ಬೆಚ್ಚಿಬೀಳಿಸಿದರು, ಆದರೆ ಮೈತ್ರಿ ಕೆಲವೇ ತಾಸುಗಳ ಕಾಲವೂ ಉಳಿಯಲಿಲ್ಲ, ಆದರೆ ಈ ಕ್ರಮವು ಬಿಜೆಪಿಯನ್ನು ಅಧಿಕಾರದ ಲಾಲಸೆಯ ಪಕ್ಷವಾಗಿ ನೋಡುವಂತೆ ಮಾಡಿತು. ಆದರೆ ಈಗ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವ ಮೂಲಕ ಬಿಜೆಪಿ ಅಧಿಕಾರದ ಹಿಂದೆ ಬೀಳದ ಪಕ್ಷ ಎಂದು ತನ್ನ ಇಮೇಜ್ ಅನ್ನು ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

* ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನಿರ್ಗಮಿಸುವಾಗ, ಉದ್ಧವ್ ಠಾಕ್ರೆ ಅವರು ಬಿಜೆಪಿಯವರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ನಿರೂಪಣೆಯನ್ನು ಬಿಂಬಿಸಿದ್ದರು. “ನೀವು [ಬಿಜೆಪಿ] ಬಾಳಾಸಾಹೇಬ್ ಅವರ ಮಗನನ್ನು ಕೆಳಗೆ ಇಳಿಸಿದ್ದೀರಿ” ಎಂದು ಉದ್ಧವ್ ತಮ್ಮ ರಾಜೀನಾಮೆ ಭಾಷಣದಲ್ಲಿ ಹೇಳಿದ್ದ. ಈ ನಿರೂಪಣೆಯು ಮತದಾರರಿಗೆ ಸಂಬಂಧಿಸಿದಂತೆ ಉದ್ಧವ್ ಅವರ ಭಾವನಾತ್ಮಕ ಮತ್ತು ರಾಜಕೀಯ ಲಾಭವನ್ನು ತರುವ ಭಾಷಣವಾಗಿತ್ತು. ಹೀಗಾಗಿ ಒಬ್ಬ ‘ಶಿವ ಸೈನಿಕ’ ಮುಖ್ಯಮಂತ್ರಿಯಾಗುವುದನ್ನು ಖಾತ್ರಿಪಡಿಸುವ ಮೂಲಕ, ಈ ನಿರೂಪಣೆಯು ಪರಿಣಾಮ ಬೀರದಂತೆ ಮಾಡುವ ಉದ್ದೇಶವೂ ಅಡಗಿದೆ.

* ಬಿಜೆಪಿಯು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಅವರ ಪರಂಪರೆಯನ್ನು ನಿಜವಾಗಿಯೂ ಬೆಂಬಲಿಸುವ ಚಿತ್ರಣವನ್ನು ನೀಡಲು ಬಿಜೆಪಿ ಸ್ಪಷ್ಟವಾಗಿ ಬಯಸುತ್ತದೆ. ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಘೋಷಿಸುವ ಮುನ್ನ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ‘ಶಿವಸೈನಿಕ’ರೇ ಇರುತ್ತಾರೆ ಹಾಗೂ‘ಬಾಳಾಸಾಹೇಬರ ಕನಸು ನನಸಾಗುತ್ತದೆ ಎಂದು ಹೇಳಿದ್ದರು. ಅಂದರೆ ಈ ಶಿವಸೇನೆ ಬಣವನ್ನೇ ನಿಜವಾದ ಶಿವಸೈನಿಕ ಬಣ ಎಂದು ಜನರ ಮುಂದೆ ಬಿಂಬಿಸುವ ಪ್ರಯತ್ನವೂ ಇದೆ. ಜೊತೆಗೆ ಈ ಬಣ ಹಿಂದುತ್ವದ ವಿಷಯದಲ್ಲಿ ಬದ್ಧತೆ ತೋರುವ ಬಣ ಎಂದು ಜನರ ಮುಂದೆ ಹೇಳುವ ಪ್ರಯತ್ನವೂ ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರ ಹಿಂದಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

* ಮಹಾರಾಷ್ಟ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ಪ್ರಶ್ನೆಯನ್ನು ಎಸೆದಿವೆ: ನಿಜವಾದ ಶಿವಸೇನೆ ಯಾರು? ಈ ಪ್ರಶ್ನೆಗೆ ಉತ್ತರ ಸಿಗದೇ ಕೆಲಕಾಲ ಉಳಿಯಬಹುದು ಆದರೆ ಬಾಳಾಸಾಹೇಬರ ನಿಜವಾದ ಪರಂಪರೆಯನ್ನು ಮುಂದಿಟ್ಟುಕೊಂಡು ದನಿಯೆತ್ತಿರುವ ಏಕನಾಥ್ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ 2024ರ ಚುನಾವಣೆ ಬಂದಾಗ ನಿಜವಾದ ಶಿವಸೇನೆ ಬಿಜೆಪಿಯೊಂದಿಗೆ ಎಂದು ಹೇಳಿಕೊಳ್ಳಲು ಬಿಜೆಪಿಗೆ ಸುಲಭವಾಗಲಿದೆ.

* ಏಕನಾಥ್ ಶಿಂಧೆಯವರು ಗಣನೀಯ ಸಂಖ್ಯೆಯ ಶಿವಸೇನೆಯ ಶಾಸಕರ ಬೆಂಬಲವನ್ನು ಹೊಂದಿರಬಹುದು ಆದರೆ ರಾಜಕೀಯದಲ್ಲಿ ಪರಿಸ್ಥಿತಿಗಳು ಸ್ವಲ್ಪಮಟ್ಟಿಗೆ ಬದಲಾಗಬಹುದು ಮತ್ತು ಆದ್ದರಿಂದ, ‘ಬಂಡಾಯ’ ಶಾಸಕರು ಮತ್ತೊಮ್ಮೆ ಬಂಡಾಯವೆದ್ದರ ಬೆದರಿಕೆ ಯಾವಾಗಲೂ ದಿಗಂತದಲ್ಲಿ ಉಳಿಯುತ್ತದೆ. ಆದಾಗ್ಯೂ, ಈ ಶಾಸಕರು ತಮ್ಮದೇ ಪಕ್ಷದ ನೇತೃತ್ವದ ಸರ್ಕಾರದ ಭಾಗವಾದರೆ ಪಾಳೆಯವನ್ನು ಒಟ್ಟಿಗೆ ಇಟ್ಟುಕೊಳ್ಳುವಲ್ಲಿ ಸ್ವಲ್ಪಮಟ್ಟಿಗೆ ಅನುಕೂಲವಾಗುತ್ತದೆ.

ಇದೆಲ್ಲವೂ ಸದ್ಯಕ್ಕೆ ಇರುವಂಥದ್ದು. ಮಹಾರಾಷ್ಟ್ರದಲ್ಲಿ ಕಿರಿಯ ಪಾಲುದಾರನಾಗಿ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಶಿವಸೇನೆ ಗೊಂದಲದಲ್ಲಿದೆ. 2024 ರ ವಿಧಾನಸಭಾ ಚುನಾವಣೆಯ ನಂತರ ಪಕ್ಷವು ಸ್ವಂತವಾಗಿ ಸರ್ಕಾರವನ್ನು ಸ್ಥಾಪಿಸಲು ಪ್ರಯತ್ನಿಸಬಹುದು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement