2 ವರ್ಷಗಳ ನಂತರ ಅಮರನಾಥ ಯಾತ್ರೆ ಪ್ರಾರಂಭ, ಸ್ಥಳದಲ್ಲಿ ಭಾರಿ ಭದ್ರತಾ ವ್ಯವಸ್ಥೆ

ನವದೆಹಲಿ: ಎರಡು ವರ್ಷಗಳ ನಂತರ ಅಮರನಾಥ ಯಾತ್ರೆ ಇಂದು, ಗುರುವಾರದಿಂದ ಆರಂಭವಾಗಲಿದೆ. 43 ದಿನಗಳ ಯಾತ್ರೆ ಮೇಲೆ ಭೈಯೋತ್ಪಾದಕರ ದಾಳಿ ತಡೆಯಲು ಗರಿಷ್ಠ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನು ಒಳಗೊಂಡಂತೆ ಉದ್ದೇಶೀತ ಹತ್ಯೆಗಳು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಕ್ರಮಗಳು ಬಂದಿವೆ.
ಭದ್ರತಾ ಏಜೆನ್ಸಿಗಳು ಅನುಸರಿಸುತ್ತಿರುವ ಆಕ್ರಮಣಕಾರಿ ವಿಧಾನದಿಂದಾಗಿ, ಭಯೋತ್ಪಾದಕರ ಹಿಂಸಾಚಾರ ಕಡಿಮೆಯಾಗಿದೆ.ಈ ವರ್ಷದ ಜೂನ್‌ನಲ್ಲಿ, 30 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ.

ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ವರ್ಷದ ಮೊದಲ ಆರು ತಿಂಗಳಲ್ಲಿ, 121 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದಿದ್ದಾರೆ, ಅದರಲ್ಲಿ 34 ವಿದೇಶಿ ಮೂಲದವರು ಮತ್ತು 87 ಸ್ಥಳೀಯರು ಎಂದು ಹೇಳಲಾಗಿದೆ.
ದಾಖಲೆಗಳ ಪ್ರಕಾರ, ಕಣಿವೆಯಲ್ಲಿ ಇನ್ನೂ 144 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ, ಅದರಲ್ಲಿ 82 ವಿದೇಶಿ ಭಯೋತ್ಪಾದಕರು ಮತ್ತು 62 ಸ್ಥಳೀಯರು.
ಈ ವರ್ಷ 69 ಸ್ಥಳೀಯ ಹುಡುಗರು ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ” ಎಂದು ಹಿರಿಯ ಮಟ್ಟದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಅಮರನಾಥ ಯಾತ್ರೆಗೆ ರಕ್ಷಣಾ ಪಡೆಗಳ ನಿಯೋಜನೆಯ ಹೊರತಾಗಿ, ಡ್ರೋನ್ ಕಣ್ಗಾವಲು ಮತ್ತು RFID (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಚಿಪ್‌ಗಳು ಸಹ ಯಾತ್ರಾರ್ಥಿಗಳಿಗೆ ಮೂರು ಹಂತದ ಭದ್ರತಾ ವ್ಯವಸ್ಥೆಗಳ ಭಾಗವಾಗಿರುತ್ತವೆ.
“ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆಯನ್ನು ಹೊರತುಪಡಿಸಿ ವಿವಿಧ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) 300 ಪ್ಲಸ್ ಕಂಪನಿಗಳನ್ನು ನಿಯೋಜಿಸಲಾಗಿದೆ ಮತ್ತು ಮೂರು ಹಂತದ ಭದ್ರತೆಯನ್ನು ಒದಗಿಸುತ್ತಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement