ರೈಲಿನಲ್ಲಿ ಚಹಾ ಕುಡಿದರೆ 20 ರೂ. ಚಹಾಕ್ಕೆ 50 ರೂ. ಸೇವಾ ಶುಲ್ಕ…!

ನವದೆಹಲಿ : ರೈಲು ಪ್ರಯಾಣದ ವೇಳೆ ತಿಂಡಿ-ತಿನಿಸು ದುಬಾರಿಯೇ ? ಇದಕ್ಕೆ ಪುಷ್ಟಿ ನೀಡುವಂತೆ ರೈಲು ಪ್ರಯಾಣಿಕರೊಬ್ಬರು ಚಹಾವೊಂದಕ್ಕೆ 70 ರೂಪಾಯಿ ಪಾವತಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅವರು ಹಂಚಿಕೊಂಡ ಬಿಲ್ ಪ್ರಕಾರ ಒಂದು ಚಹಾದ ಬೆಲೆ 70 ರೂ.ಗಳು. ಅಂದರೆ 20 ರೂ.ಗಳು ಚಹಾ ಹಾಗೂ ಸೇವಾ ಶುಲ್ಕ 50 ರೂಪಾಯಿಯಂತೆ.
ದೆಹಲಿಯಿಂದ ಭೋಪಾಲ್‍ಗೆ ಜೂನ್ 28ರಂದು ಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ಈ ಅನುಭವವಾಗಿದೆಯಂತೆ. ತೆರಿಗೆ ಇನ್‍ವೈಸ್‍ಗಳ ಫೋಟೊಗಳು ಟ್ವಿಟ್ಟರ್ ಮತ್ತು ರೆಡ್ಡಿಟ್‍ನಲ್ಲಿ ವೈರಲ್ ಆಗಿದೆ.

ಆದರೆ ರೈಲ್ವೆ ಇಲಾಖೆಯ ಪ್ರಕಾರ, ಟಿಕೆಟ್ ಕಾಯ್ದಿರಿಸುವ ವೇಳೆ ಆಹಾರ ಬುಕ್ಕಿಂಗ್ ಮಾಡದೇ, ಪ್ರಯಾಣದ ವೇಳೆ ಆಹಾರಕ್ಕಾಗಿ ಮನವಿ ಮಾಡಿದರೆ 50 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆಯಂತೆ. ಈ ಸಂಬಂಧ 2018ರಲ್ಲೇ ಸುತ್ತೋಲೆ ಹೊರಡಿಸಲಾಗಿದೆಯಂತೆ.

ಆದರೆ ರೈಲ್ವೇ ಪ್ರಕಾರ, ಪ್ರಯಾಣಿಕರು ತಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸುವಾಗ ಆಹಾರವನ್ನು ಮುಂಚಿತವಾಗಿ ಆರ್ಡರ್ ಮಾಡದಿದ್ದರೆ, ಪ್ರಯಾಣದ ಸಮಯದಲ್ಲಿ ಏ ಆರ್ಡರ್ ಮಾಡಿದರೆ 50 ರೂಪಾಯಿ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement