4 ಕೈಗಳು 4 ಕಾಲುಗಳ ಮಗು ಜನನ: ಇದು ದೇವಿಯ ಅವತಾರ ಎಂದ ಜನ

ಹಾರ್ಡೋಯ್: ಉತ್ತರಪ್ರದೇಶದ ಹರ್ದೋಯಿಯಲ್ಲಿ ಅಸಾಮಾನ್ಯ ಹೆಣ್ಣು ಮಗುವೊಂದು ಜನಿಸಿದ್ದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕೆಲವರು ಇದನ್ನು ದೇವರ ಪವಾಡ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಆದರೆ ವೈದ್ಯರು ಇದನ್ನು ಜೈವಿಕ ಅಸ್ವಸ್ಥತೆ ಎಂದು ಹೇಳುತ್ತಾರೆ.

ಹರ್ದೋಯಿಯಲ್ಲಿರುವ ಶಹಾಬಾದ್ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರು ನಾಲ್ಕು ತೋಳುಗಳು ಮತ್ತು ನಾಲ್ಕು ಕಾಲಿನ ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯಾದ ಬಳಿಕ ಅಲ್ಲಿದ್ದ ವೈದ್ಯರು ಹಾಗೂ ಇತರ ಸಿಬ್ಬಂದಿ ಮಗುವನ್ನು ನೋಡಿದಾಗ ಅಚ್ಚರಿಗೊಂಡಿದ್ದಾರೆ. ಮಗುವಿಗೆ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿರುವುದನ್ನು ಕಂಡು ಕುಟುಂಬಸ್ಥರು ಬೆಚ್ಚಿದ್ದಾರೆ. ವಿಶಿಷ್ಟ ಮಗುವಿನ ಜನನದ ಮಾಹಿತಿ ಬಂದ ತಕ್ಷಣ, ಅದನ್ನು ನೋಡುವ ಜನರ ಗುಂಪು ಆಸ್ಪತ್ರೆಯನ್ನು ತಲುಪಲು ಪ್ರಾರಂಭಿಸಿದೆ.
ಶನಿವಾರ ತಡರಾತ್ರಿ ಹರ್ದೋಯ್ ಜಿಲ್ಲೆಯ ಮಂಗ್ಲಿಪುರ ಗ್ರಾಮದ ನಿವಾಸಿಯಾಗಿರುವ ಮಹಿಳೆಯ ಕುಟುಂಬಸ್ಥರು ಹೆರಿಗೆ ನೋವಿನ ನಂತರ ಶಹಾಬಾದ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ತಡರಾತ್ರಿ ಮಹಿಳೆ ಸಾಮಾನ್ಯ ಹೆರಿಗೆ ಮೂಲಕ ಈ ವಿಶಿಷ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಕ್ಷಣ ಮಗುವಿನ ಕುಟುಂಬ ಸದಸ್ಯರಿಗೆ ಆಸ್ಪತ್ರೆಯಿಂದ ಮಾಹಿತಿ ನೀಡಲಾಯಿತು. ಮೊದಮೊದಲು ನಾಲ್ಕು ಕೈ ಕಾಲುಗಳ ವಿಚಾರದಲ್ಲಿ ಮನೆಯವರಿಗೆ ನಂಬಿಕೆ ಇರಲಿಲ್ಲವಾದರೂ ಮಗುವನ್ನು ಕಂಡಾಗ ಅವರ ಬೆರಗಾಗಿದ್ದಾರೆ. ಅಲ್ಲದೆ, ಮಗುವಿನ ಬಗ್ಗೆ ಆತಂಕಗೊಂಡಿದ್ದಾರೆ. ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಮಾಡಲಾಗಿತ್ತು ಮತ್ತು ಎಲ್ಲವೂ ಸಾಮಾನ್ಯವಾಗಿದೆ ಎಂದು ಹೇಳಲಾಗಿತ್ತು,ಆದರೆ ಮಗು ಜನಿಸಿದಾಗ ಇದು ಸಂಭವಿಸಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ನಾಲ್ಕು ಕೈ ಮತ್ತು ನಾಲ್ಕು ಕಾಲಿನ ಮಗು ಜನಿಸಿದ ಮಾಹಿತಿ ಸಿಕ್ಕಿದ ತಕ್ಷಣ ಜನರು ನೋಡಲು ಆಸ್ಪತ್ರೆಗೆ ಬರಲು ಪ್ರಾರಂಭಿಸಿದರು. ಕೆಲವರು ಮಗುದೇವಿಯ ಅವತಾರ ಎಂದು ಹೇಳುತ್ತಿದ್ದಾರೆ. ಆದರೆ ಇಂತಹ ಪ್ರಕರಣವನ್ನು ವಿಜ್ಞಾನದಲ್ಲಿ ಜೈವಿಕ ಅಸ್ವಸ್ಥತೆ ಎಂದು ಪರಿಗಣಿಸಲಾಗುತ್ತದೆಎಂದು ವೈದ್ಯರು ಹೇಳುತ್ತಾರೆ. ಗರ್ಭಾಶಯದಲ್ಲಿ ಮಗುವಿನ ಸರಿಯಾದ ಬೆಳವಣಿಗೆಯ ಕೊರತೆಯಿಂದಾಗಿ ಈ ತರಹ ಸಂಭವಿಸುತ್ತದೆ ಎಂದು ಅವರು ಹೇಳುತ್ತಾರೆ. ಮಗುವಿಗೆ ಅಂಟಿಕೊಂಡಿರುವ ಕೈ ಕಾಲುಗಳನ್ನು ಬೇರ್ಪಡಿಸಲು ಸಾಧ್ಯತೆಯ ಬಗ್ಗೆ ಯೋಚಿಸಲಾಗುತ್ತಿದೆ. ಈ ಮಗು ಹೀಗೆ ಇದ್ದರೆ ಇದರ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂಬ ಆತಂಕವನ್ನೂ ವೈದ್ಯರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕುಟುಂಬಸ್ಥರ ಅನುಮತಿ ಮೇರೆಗೆ ಕೈಗೊಳ್ಳಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement