ಉತ್ತರ ಕನ್ನಡ ಜಿಲ್ಲೆ ಕ್ಯಾಸಲ್ ರಾಕ್‌ನಲ್ಲಿ 25 ಸೆಂಮೀ ದಾಖಲೆ ಮಳೆ: ನಾಳೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಜುಲೈ 8ರಂದು ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಈ ಅವಧಿಯಲ್ಲಿ 204 ಮಿಮೀ ಮಳೆ ಬೀಳುವ ಸಂಭವ ಇದೆ. ಅಲ್ಲದೆ, ಈ ಭಾಗಗಳಲ್ಲಿ ಜುಲೈ 9, 10ರಂದು ಆರೆಂಜ್ ಅಲರ್ಟ್ ಪ್ರಕಟಿಸಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, , ಜುಲೈ 9ರಿಂದ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಬೆಳಗಾವಿ, ಕಲಬುರಗಿ ಮತ್ತು ಬೀದರ್‌ನಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಒಂದೇ ದಿನ 25 ಸೆಂಮೀ.ಮಳೆ:
ಗುರುವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕ್ಯಾಸಲ್ ರಾಕ್‌ನಲ್ಲಿ ಬರೋಬ್ಬರಿ 25 ಸೆಂಮೀ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಮೂಲ್ಕಿ ಮತ್ತು ಬೆಳ್ತಂಗಡಿ ತಲಾ 20 ಸೆಂಮೀ., ಚಿಕ್ಕಮಗಳೂರಿನಲ್ಲಿ ಸರಾಸರಿ 15 ಸೆಂಮೀ ಮಳೆಯಾಗಿದೆ ಹಾಗೂ ಉಡುಪಿಯ ಕೋಟಾ, ಸಿದ್ಧಾಪುರ, ಅಂಕೋಲಾದಲ್ಲಿ 15 ಸೆಂಮೀ ಮಳೆ ಹಾಗೂ ಬೆಳಗಾವಿಯಲ್ಲಿ 10 ಸೆಂಮೀ ಮಳೆ ಸುರಿದಿದೆ.

ಪ್ರಮುಖ ಸುದ್ದಿ :-   ಹಾಗಾದ್ರೆ ಕೇರಳದ ಕಾಂಗ್ರೆಸ್‌ ಸಿಎಂ, ತಮಿಳುನಾಡು ಟಿವಿಕೆ ಸಿಎಂ ಕೂಡ ಮತಗಳ್ಳರೇ: ಸಿಜೆಪಿ ಹೇಳಿಕೆಗೆ ಚೇತನ್ ಅಹಿಂಸಾ ಆಕ್ಷೇಪ

ಎಡೆಬಿಡದೆ ಕಳೆದ ಐದಾರು ದಿನಗಳಿಂದ ಸುರಿಯುತ್ತಿರು ಮಳೆಗೆ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ, ಕುದ್ರು ಪ್ರದೇಶ ಮುಳುಗಡೆಯಾಗಿದೆ.
ಸಾಲ್ಬುಡದ ಕುದ್ರು ಗ್ರಾಮದ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ನಾವುಂದ ಕುದ್ರುವಿನಲ್ಲಿ ಮನೆ ಕುಸಿದು ಬಿದ್ದಿದೆ. ಮರವಂತೆ, ಬಡಾಕೆರೆ ಮೊದಲಾದ ಪ್ರದೇಶಗಳಲ್ಲಿಯೂ ನೆರೆ ಕಾಣಿಸಿಕೊಂಡಿದೆ. ಪಂಚ ಗಂಗಾವಳಿ ನದಿಗಳು ತುಂಬಿ ಹರಿಯುತ್ತಿದ್ದು ಹಲವೆಡೆ ನೆರೆ ಕಾಣಿಸಿಕೊಂಡಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ಮುನ್ಸೂಚನೆ ನೀಡಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement