ಪತಿ, ಪತ್ನಿ ಮತ್ತು ಪಾಸ್‌ಪೋರ್ಟ್: ಏನೋ ಮಾಡಲು ಹೋಗಿ ಜೈಲಿಗೆ ಹೋದ ಭೂಪ…

ಮುಂಬೈನಲ್ಲಿರುವ ವ್ಯಕ್ತಿಯೊಬ್ಬರು ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡರು, ದ್ವೀಪದ ಸ್ವರ್ಗದಲ್ಲಿ ತನ್ನ ಪ್ರೇಮಿಕಾಳೊಂದಿಗೆ ಕುಣಿದು ಕುಪ್ಪಳಿಸಿದ, ನಂತರ ತನ್ನ ಹೆಂಡತಿಯನ್ನು ಕತ್ತಲೆಯಲ್ಲಿಡಲು ತನ್ನ ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರದಿ ಹಾಕಿದ ನಂತರ ತಮಗೆ ತಾವೇ ತೊಂದರೆ ತಂದುಕೊಂಡ..
ಬಂಧಿತ ವ್ಯಕ್ತಿ 32 ವರ್ಷದ ಇಂಜಿನಿಯರ್ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅಧಿಕೃತ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ತೆರಳುವುದಾಗಿ ಪತ್ನಿಗೆ ತಿಳಿಸಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ರಜೆಯ ಮೇಲೆ ಮಾಲ್ಡೀವ್ಸ್ ಗೆ ತೆರಳಿದ್ದ.
ಆದರೆ, ಆ ವ್ಯಕ್ತಿ ತನ್ನ ಕರೆಗಳನ್ನು ಸ್ವೀಕರಿಸದಿದ್ದಾಗ, ಅವನ ಹೆಂಡತಿಗೆ ಅನುಮಾನ ಬಂತು. ಪತ್ನಿ ಆತನಿಗೆ ಪದೇ ಪದೇ ವಾಟ್ಸಾಪ್‌ನಲ್ಲಿ ಕರೆ ಮಾಡಿದಳು ಮತ್ತು ಕೊನೆಗೆ ಆತನ ತನ್ನ ರಜೆ ಕಡಿತ ಮಾಡಲು ನಿರ್ಧರಿಸಿದನು. ತಾನು ಮಾಲ್ಡೀವ್ಸ್‌ಗೆ ಹೋಗಿರುವುದನ್ನು ತನ್ನ ಹೆಂಡತಿಯಿಂದ ಮರೆಮಾಚಲು, ಆ ವ್ಯಕ್ತಿ ತನ್ನ ಪಾಸ್‌ಪೋರ್ಟ್‌ನಲ್ಲಿನ ವೀಸಾ ಮುದ್ರೆಯ ಪುಟಗಳನ್ನು ಹರಿದು ಹಾಕಿದ್ದಾನೆ.

ಇಂಜಿನಿಯರ್ ಗುರುವಾರ ರಾತ್ರಿ ಮುಂಬೈಗೆ ಬಂದಿಳಿದಿದ್ದಾನೆ. ಅಲ್ಲಿ ವಲಸೆ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌ನಲ್ಲಿ 3-6 ಮತ್ತು 31-34 ಪುಟಗಳು ಕಾಣೆಯಾಗಿರುವುದನ್ನು ಗಮನಿಸಿದರು. ಅದರ ಬಗ್ಗೆ ಕೇಳಿದಾಗ, ಆ ವ್ಯಕ್ತಿ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.
ಆತ ಉದ್ದೇಶಪೂರ್ವಕವಾಗಿ ತನ್ನ ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರಿದು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣಿಸಿದನು ಮತ್ತು ಆದ್ದರಿಂದ ಅವನು ಪಾಸ್‌ಪೋರ್ಟ್ ಪ್ರಾಧಿಕಾರ ಮತ್ತು ವಲಸೆ ಇಲಾಖೆಗೆ ವಂಚನೆ ಮಾಡಿ ಅಪರಾಧವನ್ನು ಎಸಗಿದ್ದಾನೆ” ಎಂದು ವಲಸೆ ಅಧಿಕಾರಿಯೊಬ್ಬರು ಸಹಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ಮಿಡ್-ಡೇ ವರದಿ ಮಾಡಿದೆ. .
ವಿಚಾರಣೆಯ ಸಮಯದಲ್ಲಿ, ಆ ವ್ಯಕ್ತಿ ಮಾಲ್ಡೀವ್ಸ್‌ನಲ್ಲಿ ತನ್ನ ಪ್ರೇಮಿಯೊಂದಿಗೆ ರಜೆಯ ಮೇಲೆ ಹೋಗಿರುವುದನ್ನು ಬಹಿರಂಗಪಡಿಸಿದನು. ಪತ್ನಿಯಿಂದ ತನ್ನ ಪ್ರವಾಸವನ್ನು ಗೌಪ್ಯವಾಗಿಡಲು ಪಾಸ್‌ಪೋರ್ಟ್‌ನ ಪುಟಗಳನ್ನು ಕಿತ್ತುಹಾಕಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ
ಭಾರತ ಸರ್ಕಾರ ನೀಡಿದ ಪಾಸ್‌ಪೋರ್ಟ್‌ಗೆ ಹಾನಿ ಮಾಡುವುದು ಕ್ರಿಮಿನಲ್ ಕೃತ್ಯ ಎಂದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಾವೆಲ್ಲರೂ ಒಂದ ದಿನ ಹೋಗಲೇಬೇಕು, ನಾಳೆ ನಾನು ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ನಾನಾ ಪಾಟೇಕರ್ ಮಾತು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement