ಫತೇಪುರ್ (ಉತ್ತರ ಪ್ರದೇಶ): ಚಾಲಕನನ್ನು ಕಂಡು ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದ ಆಟೊವನ್ನು ನಿಲ್ಲಿಸಿದ ನಂತರ ಉತ್ತರ ಪ್ರದೇಶ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ.. ಯಾಕೆಂದರೆ ಹಿರಿಯರು ಮತ್ತು ಮಕ್ಕಳು ಸೇರಿದಂತೆ 26 ಮಂದಿ ಪ್ರಯಾಣಿಕರನ್ನು ಆ ಆಟೊದಲ್ಲಿಒಯ್ಯಲಾಗುತ್ತಿತ್ತು…!!
ಪೊಲೀಸರು ಆಟೊದಲ್ಲಿದ್ದ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುವ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.
ಪೊಲೀಸರು ಸ್ಪೀಡ್ ಗನ್ ಪರಿಶೀಲಿಸಿದಾಗ ಫತೇಪುರ್ನ ಬಿಂಡ್ಕಿ ಕೊಟ್ವಾಲಿ ಪ್ರದೇಶದ ಬಳಿ ಆಟೋ ಮೊದಲು ಪತ್ತೆಯಾಗಿದೆ. ಅತಿ ವೇಗದಿಂದ ಬಂದ ಆಟೋವನ್ನು ಪೊಲೀಸರು ಹಿಂಬಾಲಿಸಿದ್ದಾರೆ.
ನಂತರ ಆಟೋ ತಡೆದ ಅಧಿಕಾರಿಗಳು ಪ್ರಯಾಣಿಕರನ್ನು ಒಬ್ಬೊಬ್ಬರನ್ನೇ ಇಳಿಸಲು ಪ್ರಾರಂಭಿಸಿದಾಗ, ಅದರಲ್ಲಿ 27 ಜನರನ್ನು ತುಂಬಿದ್ದನ್ನು ನೋಡಿ ದಿಗ್ಭ್ರಮೆಗೊಂಡರು, ಚಾಲಕ ಸೇರಿದಂತೆ ಎಲ್ಲರೂ ಆಟೋದಿಂದ ಹೊರಬಂದರು.ಆ ಬಳಿಕ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ