ಅಂಬುಲೆನ್ಸ್ ಸಿಗದೆ 2 ವರ್ಷದ ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ವಾಹನಕ್ಕೆ ಕಾಯುತ್ತ ಕುಳಿತ 8 ವರ್ಷದ ಬಾಲಕ…!

ಭೋಪಾಲ್: ಎಂಟು ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ತಮ್ಮನ ಶವವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಕರುಣಾಜನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಶನಿವಾರ ಮಧ್ಯಪ್ರದೇಶದ ಮೊರೆನಾ ಬೀದಿಯಲ್ಲಿ ಎಂಟು ವರ್ಷದ ಬಾಲಕ ತನ್ನ ಎರಡು ವರ್ಷದ ಕಿರಿಯ ಸಹೋದರನ ಶವದೊಂದಿಗೆ ಕುಳಿತಿರುವ ದೃಶ್ಯ ಕಂಡುಬಂದಿದೆ.
ಪೂಜಾರಾಮ್ ಜಾಧವ್ ಎಂಬವರು ತನ್ನ ಕಿರಿಯ ಮಗ ರಾಜಾ (2) ಎಂಬವನನ್ನು ಚಿಕಿತ್ಸೆಗಾಗಿ ಮೊರೆನಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ರಕ್ತಹೀನತೆಯಿಂದಾಗಿ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ನಂತರ ಆಸ್ಪತ್ರೆಯಿಂದ 30 ಕಿಮೀ ದೂರದಲ್ಲಿರುವ ಮನೆಗೆ ಶವ ತೆಗೆದುಕೊಂಡು ಹೋಗಲು ಬಡವ ಮತ್ತು ಅಸಹಾಯಕನಾದ ಪೂಜಾರಾಮ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಸಿಬ್ಬಂದಿ ಮುಂದೆ ಮನವಿ ಮಾಡಿದ್ದಾರೆ. ಆದರೆ ಯಾರೂ ಸ್ಪಂದಿಸಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಆಂಬುಲೆನ್ಸ್ ನಲ್ಲಿ ಮೃತದೇಹ ಒಯ್ಯಲು ಚಾಲಕ ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಬೇಕಾಯಿತು. ಹತ್ತಿರವಿದ್ದ ಪಾರ್ಕ್ ನಲ್ಲಿ ಎಂಟು ವರ್ಷದ ಹಿರಿಯ ಪುತ್ರ ಗುಲ್ಶನ್‌ನನ್ನು ನನ್ನು ಬಿಟ್ಟು ವಾಹನ ವ್ಯವಸ್ಥೆ ಮಾಡಲು ಪೂಜಾರಾಮ್‌ ತೆರಳಿದ್ದಾರೆ. ಗುಲ್ಶನ್ ತನ್ನ ತಂದೆ ಹಿಂದಿರುಗುವ ನಿರೀಕ್ಷೆಯಲ್ಲಿ ಮೃತಪಟ್ಟ ತಮ್ಮನ ತಲೆಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬಹಳ ಹೊತ್ತಿನ ವರೆಗೆ ಕುಳಿತಿದ್ದಾನೆ. ಇದನ್ನು ನೋಡಿ ಜನಸೇರಿದ್ದಾರೆ. ಜನಸಂದಣಿಯಿಂದ ಎಚ್ಚರಗೊಂಡ ಪೊಲೀಸರು ತಕ್ಷಣವೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಚಾಲಕನಿಗೆ ಪೂಜಾರಾಮ್ ಜಾಧವ್ ಅವರ ಮನೆಗೆ ಹೋಗುವಂತೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮೂರನೇ ಹಂತದಲ್ಲಿ ಅಂದಾಜು 64.4%ರಷ್ಟು ಮತದಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement