ಎಐಎಡಿಎಂಕೆ ಜಗಳ: ಇಪಿಎಸ್ ಈಗ ಹೊಸ ಬಾಸ್, ಪ್ರತಿಸ್ಪರ್ಧಿ ಒಪಿಎಸ್ ಪಕ್ಷದಿಂದ ಉಚ್ಛಾಟನೆ

ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಯಲ್ಲಿ ಪ್ರಸ್ತುತ ಉಭಯ ನಾಯಕತ್ವದ ಮಾದರಿಯನ್ನು ಕೊನೆಗೊಳಿಸಿ, ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಇಂದು, ಸೋಮವಾರ ಉನ್ನತೀಕರಿಸಲಾಗಿದೆ.
2,500 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಜನರಲ್ ಕೌನ್ಸಿಲ್ ಪಕ್ಷವನ್ನು ಒಬ್ಬ ಸರ್ವೋಚ್ಚ ನಾಯಕನಾಗಿ ಮುನ್ನಡೆಸಲು ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್‌)ಗೆ ಅಧಿಕಾರ ನೀಡಿತು, ಆದರೆ ಪ್ರತಿಸ್ಪರ್ಧಿ ನಾಯಕ ಒ ಪನ್ನೀರಸೆಲ್ವಂ (ಒಪಿಎಸ್) ಅವರನ್ನು “ಪಕ್ಷ ವಿರೋಧಿ” ಚಟುವಟಿಕೆಗಳಿಗಾಗಿ ಹೊರಹಾಕಲಾಯಿತು. ಅವರ ಬೆಂಬಲಿಗರಾದ ಆರ್ ವೈತಿಲಿಂಗಂ ಮತ್ತು ಪಿ ಎಚ್ ಮನೋಜ್ ಪಾಂಡಿಯನ್ ಅವರನ್ನೂ ಎಐಎಡಿಎಂಕೆಯಿಂದ ಉಚ್ಛಾಟಿಸಲಾಗಿತ್ತು.
ಎಐಎಡಿಎಂಕೆ ಜನರಲ್ ಕೌನ್ಸಿಲ್ ಕ್ರಮವಾಗಿ ಒ ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಹೊಂದಿದ್ದ ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸುವಾಗ ನಿರ್ಧಾರ ತೆಗೆದುಕೊಳ್ಳುವಲ್ಲಿ ಆಗುತ್ತಿರುವ ತೊಂದರೆ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಇದರ ಬಗ್ಗೆ ಇರುವ ಅಸಮಾಧಾನವನ್ನು ಉಲ್ಲೇಖಿಸಿದೆ. ಉಭಯ ನಾಯಕತ್ವದಲ್ಲಿ, ಎಐಎಡಿಎಂಕೆ ಸತತ ಮೂರು ಚುನಾವಣಾ ಸೋಲುಗಳನ್ನು ಅನುಭವಿಸಿತ್ತು.

ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಕೆಪಿ ಮುನುಸಾಮಿ ಸೇರಿದಂತೆ ಪಕ್ಷದ ಕೆಲವು ಹಿರಿಯ ನಾಯಕರು, ಪನ್ನೀರಸೆಲ್ವಂ ಡಿಎಂಕೆ ಆಡಳಿತಕ್ಕೆ ಒಲವು ತೋರುತ್ತಿದ್ದಾರೆ ಮತ್ತು ಎಐಎಡಿಎಂಕೆಯನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತನ್ನ ಉಚ್ಛಾಟನೆಗೆ ಪ್ರತಿಕ್ರಿಯಿಸಿದ ಪನ್ನೀರಸೆಲ್ವಂ ಅವರು “1.5 ಕೋಟಿ” ಪಕ್ಷದ ಕಾರ್ಯಕರ್ತರಿಂದ ಸಂಯೋಜಕರಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಮತ್ತು ಪಳನಿಸ್ವಾಮಿ ಅಥವಾ ಇನ್ನೊಬ್ಬ ನಾಯಕನಿಗೆ ತಮ್ಮನ್ನು ಉಚ್ಚಾಟಿಸುವ ಹಕ್ಕು ಇಲ್ಲ ಎಂದು ಹೇಳಿದರು.
ಪ್ರೆಸಿಡಿಯಂ ಅಧ್ಯಕ್ಷ ಎ ತಮಿಳ್ ಮಹಾನ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ಜನರಲ್ ಕೌನ್ಸಿಲ್ ಸಭೆಯು ಮದ್ರಾಸ್ ಹೈಕೋರ್ಟ್‌ನಿಂದ ಮುಂದುವರಿಯಲ್ಲಿ ಅನುಮತಿ ಸಿಕ್ಕ ನಂತರ ಬೆಳಿಗ್ಗೆ 9:15 ರ ಸುಮಾರಿಗೆ ಪ್ರಾರಂಭವಾಯಿತು. ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಬಣ ಕರೆದಿರುವ ಸಭೆಗೆ ತಡೆ ಕೋರಿ ಪನ್ನೀರಸೆಲ್ವಂ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲು, 4 ತಿಂಗಳಲ್ಲಿ ಸಾಂಸ್ಥಿಕ ಚುನಾವಣೆ ನಡೆಸಲು ಔಪಚಾರಿಕವಾಗಿ ನಿರ್ಧರಿಸಲಾಯಿತು. ಇದು ಪಕ್ಷದ ಉನ್ನತ ಸ್ಥಾನಕ್ಕಾಗಿ ಹೋರಾಡಲು ತಾಜಾ ರೂಢಿಗಳನ್ನು ಒಳಗೊಂಡಿರುವ ಹಲವಾರು ಬೈಲಾಗಳನ್ನು ತಿದ್ದುಪಡಿ ಮಾಡಿದೆ.
ಪಕ್ಷದ 10 ವರ್ಷಗಳ ಪ್ರಾಥಮಿಕ ಸದಸ್ಯತ್ವ ಹೊಂದಿರುವ ವ್ಯಕ್ತಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ನಿಯಮಗಳಲ್ಲೊಂದು ಹೇಳುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ.. |ಹಾಸ್ಯನಟ ಕಪಿಲ್ ಶರ್ಮಾ ಕೆಫೆ ಮೇಲೆ ಒಂಬತ್ತು ಗುಂಡು ಹಾರಿಸಿದ ಖಲಿಸ್ತಾನಿ ಭಯೋತ್ಪಾದಕ

ಇದಕ್ಕೂ ಮುನ್ನ, ಹೈಕೋರ್ಟ್ ತೀರ್ಪಿಗೆ ಮುನ್ನ ಎರಡೂ ಬಣಗಳ ಬೆಂಬಲಿಗರು ಇಂದು, ಸೋಮವಾರ ಬೆಳಿಗ್ಗೆ ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಪರಸ್ಪರ ಕಲ್ಲು ತೂರಾಟ ನಡೆಸುತ್ತಿರುವುದು ಕ್ಯಾಮರಾದಲ್ಲಿ ಕಂಡುಬಂದಿದೆ. ಕೆಲವರು ಸಮೀಪದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿ ಮಾಡುತ್ತಿರುವ ದೃಶ್ಯಗಳೂ ಕಂಡುಬಂದಿವೆ.
ಕಾನೂನಿನ ಪ್ರಕಾರ ಸಂಯೋಜಕರು ಮತ್ತು ಜಂಟಿ ಸಂಯೋಜಕರು ಮಾತ್ರ ಸಭೆ ಕರೆಯಬಹುದು ಎಂದು ಪನ್ನೀರಸೆಲ್ವಂ ಪಾಳಯ ನ್ಯಾಯಾಲಯದ ಮುಂದೆ ವಾದಿಸಿತ್ತು. ಮತ್ತು ಹೊಸದಾಗಿ ನೇಮಕಗೊಂಡ ಪ್ರೆಸಿಡಿಯಂ ಅಧ್ಯಕ್ಷರು ಕರೆದ ಈ ಸಭೆ ತಾಂತ್ರಿಕವಾಗಿ ಕಾನೂನುಬಾಹಿರವಾಗಿದೆ. ಸಭೆಯ ಆಹ್ವಾನಕ್ಕೆ ಸಹಿ ಇಲ್ಲ ಎಂದು ಪನ್ನೀರಸೆಲ್ವಂ ಕೂಡ ಹೇಳಿಕೊಂಡಿದ್ದರು.ಕಳೆದ ವಾರ, ಕಾನೂನಿಗೆ ಅನುಸಾರವಾಗಿ ಸಭೆ ನಡೆಸಲು ಪಳನಿಸ್ವಾಮಿ ತಂಡಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಪಳನಿಸ್ವಾಮಿ ಏಕ ನಾಯಕತ್ವವನ್ನು ಬಯಸಿದ್ದರೆ, ಪನ್ನೀರಸೆಲ್ವಂ ಪ್ರಸ್ತುತ ಇರುವ ಉಭಯ ನಾಯಕತ್ವದ ಮಾದರಿ ಮುಂದುವರಿಸಲು ಬಯಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement