‘ಕುರ್ತಾ ಪೈಜಾಮ’ ಧರಿಸಿದ್ದಕ್ಕಾಗಿ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡ ಲಖಿಸರಾಯ್‌ ಜಿಲ್ಲಾಧಿಕಾರಿ: ಅಮಾನತು-ಸಂಬಳ ಕಡಿತಕ್ಕೆ ಆದೇಶ| ವೀಕ್ಷಿಸಿ

ನವದೆಹಲಿ: ಕೆಲಸದ ಸಮಯದಲ್ಲಿ ‘ಕುರ್ತಾ ಪೈಜಾಮ’ ಧರಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ಶಾಲೆಯ ಮುಖ್ಯಾಧ್ಯಾಪಕರನ್ನು ತರಾಟೆಗೆ ತೆಗೆದುಕೊಂಡ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಸಿಂಗ್ ಅವರು ಕುರ್ತಾ ಪೈಜಾಮ ಧರಿಸಿದ್ದಕ್ಕಾಗಿ ಬಾಲಕಿಯರ ಪ್ರಾಥಮಿಕ ಶಾಲೆಯ ಬಾಲ್‌ ಗುಡಾರ್ ಅವರನ್ನು ಗದರಿಸಿದ್ದು, ನೀವು ಶಿಕ್ಷಕರಿಗಿಂತ ಹೆಚ್ಚಾಗಿ ರಾಜಕಾರಣಿಯಂತೆ ಕಾಣುತ್ತಿರುವಿರಿ ಎಂದು ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
ವೀಡಿಯೊದಲ್ಲಿ, ಜಿಲ್ಲಾಧಿಕಾರಿ ಶಿಕ್ಷಕರ ಉಡುಪನ್ನು ಪ್ರಶ್ನಿಸುವುದನ್ನು ಕೇಳಬಹುದು “ನೀವು ಶಿಕ್ಷಕರಂತೆ ಕಾಣುತ್ತೀರಾ? ನೀವು ಜನಪ್ರತಿನಿಧಿಯಂತೆ ಕಾಣುತ್ತೀರಿ ಎಂದು ಹೇಳುತ್ತಿದ್ದಾರೆ.

ಘಟನೆ ನಡೆದಾಗ ಸರ್ಕಾರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಶಾಲೆಯಲ್ಲಿ ತಪಾಸಣೆಗೆ ತೆರಳಿದ್ದರು.
ಜಿಲ್ಲಾಧಿಕಾರಿ ಶಾಲೆಯನ್ನು ತಲುಪಿದಾಗ, ಅವರು ಮುಖ್ಯಾಧ್ಯಾಪಕರ ಡ್ರೆಸ್ಸಿಂಗ್ ಶೈಲಿಯಿಂದ ಪ್ರಭಾವಿತರಾಗಲಿಲ್ಲ ಮತ್ತು ಅದಕ್ಕಾಗಿ ಅವರಿಗೆ ಛೀಮಾರಿ ಹಾಕಿದರು. ಮುಖ್ಯಾಧ್ಯಾಪಕರಾದ ನಿರ್ಭಯ್ ಕುಮಾರ್ ಸಿಂಗ್ ಅವರು ಬಿಳಿ ಕುರ್ತಾ ಪೈಜಾಮ ಧರಿಸಿರುವುದನ್ನು ಸ್ಥಳೀಯ ಸುದ್ದಿ ವಾಹಿನಿಯೊಂದರ ವೀಡಿಯೊದಲ್ಲಿ ಕಾಣಬಹುದು.

ಜಿಲ್ಲಾಧಿಕಾರಿ ಸಿಂಗ್ ಅವರು ಶಾಲೆಯ ಕಾರ್ಯಶೈಲಿಯನ್ನು ಸಹ ಪ್ರಶ್ನಿಸಿದ್ದಾರೆ. ವೀಡಿಯೋದಲ್ಲಿ ಅವರು ಸ್ಥಳದಲ್ಲೇ ಶಿಕ್ಷಣಾಧಿಕಾರಿಗೆ ಕರೆ ಮಾಡಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸುವಂತೆ ಸೂಚಿಸಿರುವುದು ಕಂಡುಬಂದಿದೆ. ವೇತನ ಕಡಿತಗೊಳಿಸಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸುವಂತೆಯೂ ಆದೇಶಿಸಿದ್ದಾರೆ.

ಪ್ರಮುಖ ಸುದ್ದಿ :-   "ಪಾಕಿಸ್ತಾನ ನಮಗೆ ಹಾನಿ ಮಾಡಿದ ಒಂದೇ ಒಂದು ಫೋಟೋ ತೋರಿಸಿ": ಅಪರೇಶನ್‌ ಸಿಂದೂರ ವೇಳೆ ವಿದೇಶಿ ಮಧ್ಯಮಗಳ ವರದಿಗಳ ಬಗ್ಗೆ ಅಜಿತ್ ದೋವಲ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement