ವಯಸ್ಸು ಕೇವಲ ಒಂದು ಸಂಖ್ಯೆ: ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ 94 ವರ್ಷದ ಭಗವಾನಿ ದೇವಿ…!

ಟಂಪೆರೆ (ಫಿನ್‌ಲ್ಯಾಂಡ್): ಭಾರತದ 94 ವರ್ಷದ ಓಟಗಾರ್ತಿ ಭಗವಾನಿ ದೇವಿ ಅವರು ಟಂಪೆರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 100 ಮೀ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
24.74 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರುವ ಭಗವಾನಿ ದೇವಿ ಶಾಟ್‌ಪುಟ್‌ನಲ್ಲಿ ಭಗವಾನಿ ಕಂಚಿನ ಪದಕ ಪಡೆದಿದ್ದಾರೆ.
ಭಾರತದ 94 ವರ್ಷದ ಭಗವಾನಿದೇವಿ ಅವರು ವಯಸ್ಸು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಟಂಪೆರೆಯಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ (WorldMastersAthletics Championship)ನಲ್ಲಿ 100 ಮೀ ಸ್ಪ್ರಿಂಟ್ ಈವೆಂಟ್‌ನಲ್ಲಿ 24.74 ಸೆಕೆಂಡುಗಳಲ್ಲಿ ಓಡಿ ಅವರು ಚಿನ್ನದ ಪದಕವನ್ನು ಗೆದ್ದರು. ಶಾಟ್‌ಪುಟ್‌ನಲ್ಲಿ ಕಂಚಿನ ಪದಕವನ್ನೂ ಪಡೆದರು. ನಿಜವಾಗಿಯೂ ಶ್ಲಾಘನೀಯ ಪ್ರಯತ್ನ! ಎಂದು ಕ್ರೀಡಾ ಇಲಾಖೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಟ್ವೀಟ್ ಮಾಡಿದೆ.
ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳನ್ನು ಜೂನ್ 29 ರಿಂದ ಜುಲೈ 10 ರವ ರೆಗೆ ಟಂಪೆರೆಯಲ್ಲಿ ನಡೆಸಲಾಯಿತು. ಇದು 35 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷ ಮತ್ತು ಮಹಿಳಾ ಅಥ್ಲೀಟ್‌ಗಳಿಗೆ ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್) ಕ್ರೀಡೆಗಾಗಿ ವಿಶ್ವ ಚಾಂಪಿಯನ್‌ಶಿಪ್-ಕ್ಯಾಲಿಬರ್ ಈವೆಂಟ್ ಆಗಿದೆ.

ಪ್ರಮುಖ ಸುದ್ದಿ :-   ಸಾಲ ಮರುಪಾವತಿಸುವ ವಿಚಾರದಲ್ಲಿ ಜಗಳ: ಪತ್ನಿಯ ಮೂಗು ಕಚ್ಚಿ ತುಂಡರಿಸಿದ ಪತಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement