82 ವರ್ಷದ ಮಹಿಳೆಯನ್ನು ಕೊಂದ ಮುದ್ದಿನ ಪಿಟ್‌ಬುಲ್‌ ಸಾಕುನಾಯಿ !

ಲಕ್ನೊ: ಮಂಗಳವಾರ ಬೆಳಗ್ಗೆ ಲಕ್ನೊದ ಕೈಸರ್‌ಬಾಗ್ ಪ್ರದೇಶದಲ್ಲಿ 82 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು ಅವರ ಮಗನ ಮುದ್ದಿನ ಪಿಟ್‌ಬುಲ್ ನಾಯಿ ಕಚ್ಚಿ ಕೊಂದಿದೆ…!
ಮೃತರನ್ನು ಸುಶೀಲಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಅವರ ಮಗ, ಜಿಮ್ ತರಬೇತುದಾರ, ಅಮಿತ್ ಪಿಟ್ಬುಲ್ ಮತ್ತು ಲ್ಯಾಬ್ರಡಾರ್ ಜಾತಿಯ ಎರಡು ನಾಯಿಗಳನ್ನು ಸಾಕಿದ್ದರು. ಮಹಿಳೆಯ ಮೇಲೆ ದಾಳಿ ಮಾಡಿದ ಬ್ರೌನಿ ಎಂಬ ನಾಯಿಯನ್ನು ಮೂರು ವರ್ಷಗಳ ಹಿಂದೆ ಮನೆಗೆ ತರಲಾಗಿತ್ತು. ಈ ಕುಟುಂಬವು ಕೈಸರ್‌ಬಾಗ್‌ನ ಬಂಗಾಳಿ ಟೋಲಾ ಪ್ರದೇಶದಲ್ಲಿ ವಾಸಿಸುತ್ತಿದೆ.
ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆ ನಡೆದಾಗ ಮಗ ಮನೆಯಲ್ಲಿ ಇರಲಿಲ್ಲ. ನಂತರ ಅವರ ಮಗ ತಮ್ಮ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ನಂತರ ಅವರನ್ನು ಬಲರಾಂಪುರ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಹೆಚ್ಚಿನ ರಕ್ತಸ್ರಾವವಾಗಿದ್ದರಿಂದ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸುಶೀಲಾ ಅವರ ದೇಹದಲ್ಲಿ ಕುತ್ತಿಗೆಯಿಂದ ಹೊಟ್ಟೆಯವರೆಗೆ ಒಟ್ಟು 12 ತೀವ್ರ ಗಾಯಗಳು ಪತ್ತೆಯಾಗಿವೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ನೆರೆಹೊರೆಯವರ ಪ್ರಕಾರ, “ಬೆಳಿಗ್ಗೆ 6 ಗಂಟೆ ಸುಮಾರಿಗೆ ನಾಯಿಗಳು ಬೊಗಳುವುದು ಮತ್ತು ಸುಶೀಲಾ ಮೇಲೆ ದಾಳಿ ಮಾಡಿದಾಗ ಸಹಾಯಕ್ಕಾಗಿ ಅವರು ಕೂಗುವುದು ಕೇಳಿಸಿದೆ. ತಕ್ಷಣವೇ ಸಹಾಯಕ್ಕಾಗಿ ನಾವು ಅವರ ಮನೆಗೆ ಧಾವಿಸಿದೆವು ಆದರೆ ಅದು ಒಳಗಿನಿಂದ ಬೀಗ ಹಾಕಿತ್ತು. ಮಹಿಳೆಯ ಮಗ ಮನೆಗೆ ಬಂದಾಗ ಅವರು ತೆರೆದರು. ನಂತರ ಅವರು ತೀವ್ರವಾಗಿ ಗಾಯಗೊಂಡಿರುವುದನ್ನು ಕಂಡುಕೊಂಡರು.

ನಾಯಿಗಳನ್ನು ಸಾಕಲು ನಿಯಂತ್ರಣ
ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ (LMC) ಸ್ವಾನ್ ಲೈಸೆನ್ಸ್ ಕಂಟ್ರೋಲ್ ಮತ್ತು ರೆಗ್ಯುಲೇಶನ್ ಬೈ-ಲಾ 2003 ಎಂಬ ಹೆಸರಿನ ನಾಯಿಗಳನ್ನು ಸಾಕಲು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಕೈಪಿಡಿಯ ಪ್ರಕಾರ, ನಾಯಿಗಳನ್ನು ಸಾಕಲು ಇಷ್ಟಪಡುವ ಜನರು ಹಲವಾರು ಷರತ್ತುಗಳನ್ನು ಅನುಸರಿಸಿದ ನಂತರ ಕಡ್ಡಾಯವಾಗಿ ಪರವಾನಗಿಯನ್ನು ಪಡೆಯಬೇಕಾಗುತ್ತದೆ.
ಯಾವುದೇ ವ್ಯಕ್ತಿಯು ತನ್ನ ನಾಯಿಯನ್ನು ನೆರೆಹೊರೆಯವರಿಗೆ ಯಾವುದೇ ಆಕ್ಷೇಪಣೆಯಿಲ್ಲದ ರೀತಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಬಂಧನದಲ್ಲಿಡಬೇಕು ಎಂದು ಕೈಪಿಡಿಯಲ್ಲಿ ಹೇಳಲಾಗಿದೆ.
ಲಕ್ನೋ ನಗರದಲ್ಲಿ ಒಟ್ಟು 4,824 ಪರವಾನಗಿಗಳನ್ನು ನೀಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement