ಕುಮಟಾ: ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ

ಕುಮಟಾ: ಗುರು ಪೂರ್ಣಿಮೆ ನಿಮಿತ್ತ ಕೂಜಳ್ಳಿ ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ  ಕುಮಟಾದ ಹವ್ಯಕ ಸಭಾಭವನದಲ್ಲಿ ಜುಲೈ 17ರಂದು ನಾದೋಪಾಸನೆ ಕಾರ್ಯಕ್ರಮ ನಡೆಯಲಿದೆ.
ಕುಮಟಾ ಗಂಧರ್ವ ಕಲಾ ಕೇಂದ್ರದ ಸಹಯೋಗದಲ್ಲಿಈ ಕಾರ್ಯಕ್ರಮವು  ಜುಲೈ 17ರಂದು ಭಾನುವಾರ ಬೆಳಿಗ್ಗೆ 9:30ರಿಂದ ಸಂಜೆ 7ರ ವರೆಗೆ ಕುಮಟಾ ಹವ್ಯಕ ಸಭಾಭವನದಲ್ಲಿ  ಈ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಗೌರೀಶ ಯಾಜಿ ಅವರ ಶಿಷ್ಯ ವೃಂದದವರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗೌರೀಶ ಯಾಜಿ ಶಿಷ್ಯವೃಂದ ಹಾಗೂ ಕುಮಟಾ ಗಂಧರ್ವ ಕಲಾಕೇಂದ್ರ ಪ್ರಕಟಣೆಯಲ್ಲಿ ಕೋರಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement