ಸಹೋದರ ಗೊತಬಯ ರಾಜಪಕ್ಸೆ ಪಲಾಯನ ಮಾಡಿದ ನಂತರ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆಗೆ ಶ್ರೀಲಂಕಾ ತೊರೆಯದಂತೆ ನಿರ್ಬಂಧ ವಿಧಿಸಿದ ಸುಪ್ರೀಂಕೋರ್ಟ್‌

ಕೊಲಂಬೊ:ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಗೊತಬಯ ರಾಜಪಕ್ಸೆ ರಾಜೀನಾಮೆಯನ್ನು ಔಪಚಾರಿಕವಾಗಿ ಘೋಷಿಸಿದ ನಂತರ, ಸುಪ್ರೀಂ ಕೋರ್ಟ್ ಅವರ ಇಬ್ಬರು ಸಹೋದರರಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆಗೆ ದೇಶವನ್ನು ತೊರೆಯದಂತೆ ನಿರ್ಬಂಧಿಸಿದೆ.
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಗೊತಬಯ ರಾಜಪಕ್ಸೆ ಈ ವಾರದ ಆರಂಭದಲ್ಲಿ, ತಮ್ಮ ಆಡಳಿತದ ವಿರುದ್ಧದದ ಪ್ರತಿಭಟನೆಯ ನಡುವೆ ದೇಶಬಿಟ್ಟು ಮೊದಲು ಮಾಲ್ಡೀವ್ಸ್‌ಗೆ, ನಂತರ ಸಿಂಗಾಪುರಕ್ಕೆ ಪಲಾಯನ ಮಾಡಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದ್ವೀಪ ರಾಷ್ಟ್ರದ ಆರ್ಥಿಕತೆಯ ದುರುಪಯೋಗದ ನಂತರ ದೇಶವು ತೀವ್ರ ಆರಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ತಿಂಗಳುಗಳ ಕಾಲ ನಡೆದ ಸಾರ್ವಜನಿಕ ಪ್ರತಿಭಟನೆಗಳ ನಂತರ ಾವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಗೊತಬಯ ಅವರು ಬುಧವಾರ ಸಿಂಗಪುರದಿಂದ ಕಾನೂನುಬದ್ಧವಾಗಿ ರಾಜೀನಾಮೆ ನೀಡಿದ್ದಾರೆ” ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಇಂದು, ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸತ್ತು ಬುಧವಾರ ಜುಲೈ 20 ರಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಕಾರರು ಶನಿವಾರ ಅತಿಕ್ರಮಣ ಮಾಡಿದ ರಾಷ್ಟ್ರಪತಿ ಭವನವನ್ನು ಇಂದು, ಶುಕ್ರವಾರ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ. ಫೋರೆನ್ಸಿಕ್ ತಂಡವು ತಕ್ಷಣವೇ ಬಂದು ಬೆರಳಚ್ಚುಗಳನ್ನು ಸಂಗ್ರಹಿಸಲು ಪ್ರಾರಂಭಿಸಿತು, ಜೊತೆಗೆ ಹಾನಿಯ ಮಟ್ಟವನ್ನು ನಿರ್ಣಯಿಸಿತು.
ಹಂಗಾಮಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ರನಿಲ್ ವಿಕ್ರಮಸಿಂಘೆ ಅವರು “ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಕಾಪಾಡುವುದಾಗಿ” ವಾಗ್ದಾನ ಮಾಡಿದರು ಮತ್ತು ಅಧ್ಯಕ್ಷೀಯ ಅಧಿಕಾರವನ್ನು ಕಡಿತಗೊಳಿಸಿ ಸಂಸತ್ತಿಗೆ ಅಧಿಕಾರ ನೀಡುವ ಪ್ರಮುಖ ಸಾಂವಿಧಾನಿಕ ತಿದ್ದುಪಡಿಯನ್ನು ಪುನರುಜ್ಜೀವನಗೊಳಿಸುವುದಾಗಿ ವಾಗ್ದಾನ ಮಾಡಿದರು.
ನವೆಂಬರ್ 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೊತಬಯ ರಾಜಪಕ್ಸೆ ಗೆದ್ದ ನಂತರ 19ನೇ ತಿದ್ದುಪಡಿಯನ್ನು ಅಂಗೀಕರಿಸಲಾಯಿತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement