ಚುನಾವಣೆಯಲ್ಲಿ ಸೋತ ನಂತರ ಹೃದಯಾಘಾತದಿಂದ ಸಾವಿಗೀಡಾದ ಕಾಂಗ್ರೆಸ್ ಅಭ್ಯರ್ಥಿ

ರೇವಾ: ಮಧ್ಯಪ್ರದೇಶದ ರೇವಾದಲ್ಲಿ ಮುನ್ಸಿಪಲ್ ಕೌನ್ಸಿಲ್‌ಗೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಮುಖಂಡ ಹರಿನಾರಾಯಣ ಗುಪ್ತಾ ಅವರು ಭಾನುವಾರ ಫಲಿತಾಂಶ ಪ್ರಕಟವಾದಾಗ ತಾವು ಸೋತ ಸುದ್ದಿ ತಿಳಿದ ನಂತರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ರೇವಾ ಅವರ ಹನುಮಾನ ಪ್ರದೇಶದ ಪುರಸಭೆಯ ವಾರ್ಡ್ ನಂ.9 ಕ್ಕೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಹರಿನಾರಾಯಣ ಗುಪ್ತಾ ಕಣದಲ್ಲಿದ್ದರು.9ನೇ ವಾರ್ಡ್ ಫಲಿತಾಂಶ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಸ್ವತಂತ್ರ ಅಭ್ಯರ್ಥಿ ಅಖಿಲೇಶ್ ಗುಪ್ತ ಹಾಗೂ ಹರಿನಾರಾಯಣ ಗುಪ್ತ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಒಂದು ಬಾರಿ ಹರಿನಾರಾಯಣ ಗುಪ್ತ ಮೇಲುಗೈ ಸಾಧಿಸಿದರೆ, ಮತ್ತೊಂದು ಸುತ್ತಿನಲ್ಲಿ ಅಖಿಲೇಶ್ ಗುಪ್ತ ಮೇಲುಗೈ ಸಾಧಿಸಿದ್ದರು. ಕ್ಷಣಕ್ಷಣಕ್ಕೂ ಫಲಿತಾಂಶ ತಿರುವು ಪಡೆದುಕೊಂಡಿತ್ತು. ಆದರೆ ಅಂತಿಮ ಸುತ್ತಿನ ಮತ ಏಣಿಕೆಯ ಅಂತ್ಯದಲ್ಲಿ ಹರಿನಾರಾಯಣ ಗುಪ್ತ 14 ಮತಗಳ ಅಂತರದಿಂದ ಸೋಲು ಕಂಡರು.

ಆರೋಗ್ಯವಾಗಿದ್ದ ಹರಿನಾರಾಯಣ ಗುಪ್ತ ಸೋಲಿನ ಸುದ್ದಿ ಕೇಳುತ್ತಿದ್ದಂತೆ ಒಮ್ಮೆಗೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೃದಯಾಘಾತದಿಂದ ಕಾಂಗ್ರೆಸ್ ನಾಯಕ ನಿಧನರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಹರಿನಾರಾಯಣ ಗುಪ್ತಾ ಅವರು ಹನುಮನಾಳ ಕಾಂಗ್ರೆಸ್ ಘಟಕದ ಮಂಡಲ ಅಧ್ಯಕ್ಷರೂ ಆಗಿದ್ದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಭಾನುವಾರ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
16 ನಗರ ಪಾಲಿಕೆ ನಿಗಮ, 99 ನಗರ ಪಾಲಿಕೆ ಮತ್ತು 298 ನಗರ ಪರಿಷತ್ ಸೇರಿದಂತೆ 413 ಪುರಸಭೆಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಜುಲೈ 6 ಮತ್ತು 13 ರಂದು ಎರಡು ಹಂತಗಳಲ್ಲಿ ನಡೆಯಿತು.
ಫಲಿತಾಂಶಗಳ ಪ್ರಕಾರ ಬುರ್ಹಾನ್‌ಪುರ, ಸತ್ನಾ, ಖಾಂಡ್ವಾ ಮತ್ತು ಸಾಗರ್‌ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಆಮ್ ಆದ್ಮಿ ಪಕ್ಷ (ಎಎಪಿ) ಸಿಂಗ್ರೌಲಿಯಲ್ಲಿ ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆದಿದೆ. ಕಾಂಗ್ರೆಸ್‌ ಎರಡರಲ್ಲಿ ಮುಂದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement